ಅಡ್ಡೂರು ಬದ್ರಿಯಾ ಜಮಾಅತ್ ಕಮಿಟಿ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಕ್ಲೀನಿಕ್ ಕಾರ್ಯಾರಂಭ

Update: 2020-04-13 16:23 GMT

ಅಡ್ಡೂರು, ಎ.13: ಕೊರೋನ ವೈರಸ್ ಹಿನ್ನೆಲೆ ಮತ್ತು ಲಾಕ್‌ಡೌನ್ ಮಧ್ಯೆ ಸಿಲುಕಿ ಸಂಕಷ್ಟದಲ್ಲಿರುವ ಅಡ್ಡೂರು ಪರಿಸರ ಹಾಗೂ ಆಸುಪಾಸಿನ ಜನತೆಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಅಡ್ಡೂರಿನ ಬದ್ರಿಯಾ ಜಮಾಅತ್ ಕಮಿಟಿಯ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಕ್ಲೀನಿಕನ್ನು ಅಡ್ಡೂರಿನ ಅಲ್ ಮದ್ರಸತುಲ್ ಬದ್ರಿಯಾ ಕಟ್ಟಡದಲ್ಲಿ ಸೋಮವಾರ ಕಾರ್ಯಾರಂಭಗೊಳಿಸಲಾಯಿತು.

ಡಾ. ಸಬೀನಾ ಅಳಕೆ ಮತ್ತು ಡಾ. ಮುಹಮ್ಮದ್ ಸಾಲಿ ಅವರನ್ನು ಒಳಗೊಂಡ ತಂಡವು ಮಾನವೀಯ ನೆಲೆಯಲ್ಲಿ ಉಚಿತ ವ್ಯದ್ಯಕೀಯ ಸೇವೆಯನ್ನು ನೀಡಲು ಸಜ್ಜಾಗಿದೆ. ‘ಐ ಡೆಕೋರ್’ನ ಸಾಹಿಕ್ ಬಶೀರ್ ಉಚಿತ ಮೆಡಿಸಿನ್ ನೀಡಲು ಸಹಕರಿಸಿದ್ದಾರೆ.

ಬದ್ರಿಯಾ ಜಮಾಅತ್ ಕಮಿಟಿಯ ಅಧ್ಯಕ್ಷ ಟಿ. ಸೈಯದ್ ತೋಕೋರು ಉಚಿತ ತಪಾಸಣಾ ಕ್ಲೀನಿಕನ್ನು ಉದ್ಘಾಟಿಸಿದರು. ದ.ಕ. ಜಿಪಂ ಸದಸ್ಯ ಯುಪಿ ಇಬ್ರಾಹೀಂ, ಕಮಿಟಿಯ ಉಪಾಧ್ಯಕ್ಷ ಅಹ್ಮದ್ ಬಾವ ಅಂಗಡಿಮನೆ ಮತ್ತು ಝೈನುದ್ದೀನ್ ಗರಡಿ ಹಾಗೂ ಎಕೆ ಅಶ್ರಫ್, ಡಿಎಸ್ ರಫೀಕ್, ಎಂಎಸ್ ಶೇಖಬ್ಬ, ಇಬ್ರಾಹೀಂ ಕಟ್ಟಪ್ಪುನಿ, ಫಾರೂಕ್ ಕೆಳಗಿನಕೆರೆ, ಶರೀಫ್ ಗರಡಿ ಮತ್ತಿತರರು ಉಪಸ್ಥಿತರಿದ್ದರು.

ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಅಡ್ಡೂರು ಜಮಾಅತ್ ಕಮಿಟಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News