ಉಡುಪಿ: ಎ.14ರಿಂದ ಮನೆಗೆ ಔಷಧಿ ತಲುಪಿಸುವ ವ್ಯವಸ್ಥೆ
ಉಡುಪಿ, ಎ.13: ಉಡುಪಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಗ್ರಾಹಕ ರಿಗೆ ಎ.14ರಿಂದ ಕರೋನಾ ಸಾಮಾಜಿಕ ತುರ್ತು ಪರಿಸ್ಥಿತಿಯ ಲಾಕ್‌ಡೌನ್ ಮುಗಿಯುವ ವರೆಗೂ ಉಡುಪಿಯ ಸುತ್ತಮುತ್ತಲಿನ ಐದು ಕಿ.ಮೀ ವ್ಯಾಪ್ತಿ ಯಲ್ಲಿರುವ ಮನೆಗಳಿಗೆ ಔಷಧಿ ತಲುಪಿಸುವ ಕಾರ್ಯವನ್ನು ಆರಂಭಿಸಲಿದ್ದೇವೆ ಎಂದು ಆಸ್ಪತ್ರೆಯ ಮನೋವೈದ್ಯ ಹಾಗೂ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ. ಭಂಡಾರಿ ತಿಳಿಸಿದ್ದಾರೆ.
ಇದೀಗ ದೇಶದಾದ್ಯಂತ ಕೊರೊನಾ ಮಹಾಮಾರಿಯ ಭೀತಿ ಎದುರಾದ ನೆಲೆಯಲ್ಲಿ ಜನರಿಗೆ ಔಷಧಗಳು, ವೈದ್ಯಕೀಯ ಸಾಮಾಗ್ರಿಗಳನ್ನು ಖರೀದಿಸಲು ಬರುವಾಗ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಆಸ್ಪತ್ರೆಯ ಎದುರು ಸಾಲು ಸಾಲಾಗಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.
ಆದುದರಿಂದ ಔಷಧಿ ಬೇಕಾಗಿರುವ ನಮ್ಮ ಆಸ್ಪತ್ರೆಯ ಗ್ರಾಹಕರು ಅವರ ವಿಳಾಸ ಮತ್ತು ತಮ್ಮ ವೈದ್ಯರು ನೀಡಿರುವ ಔಷಧಿಯ ಸಲಹಾ ಚೀಟಿಯನ್ನು ಮೊಬೈಲ್-9242821215ಗೆ ವಾಟ್ಸ್ಅಪ್ ಮೂಲಕ ಕಳುಹಿಸಬೇಕು. ನಂತರ ಅವರ ಬೇಡಿಕೆಗೆ ಅನುಗುಣವಾಗಿ ಅಗತ್ಯ ಇರುವ ಔಷಧಿಯನ್ನು ಅವರ ಮನೆಗೆ ತಲುಪಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.