ಬಾರ್‌ಗೆ ನುಗ್ಗಿ ಮದ್ಯ ಕಳವು

Update: 2020-04-13 16:41 GMT

ಮಲ್ಪೆ, ಎ.13: ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ಬಾರ್‌ಗೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಮದ್ಯವನ್ನು ಕಳವು ಮಾಡಿರುವ ಘಟನೆ ಕೆಮ್ಮಣ್ಣು ಎಂಬಲ್ಲಿ ನಡೆದಿದೆ.

ಕೆಮ್ಮಣ್ಣುವಿನಲ್ಲಿರುವ ಸರೋವರ ಬಾರಿನ ಮಾಡಿನ ಹೆಂಚುಗಳನ್ನು ತೆಗೆದು ಒಳನುಗ್ಗಿದ ಕಳ್ಳರು, ಕೌಂಟರಿನ ಇರಿಸಿದ್ದ 750 ಎಂ.ಎಲ್ 21 ವಿಸ್ಕಿ ಬಾಟಲಿ ಮತ್ತು 180 ಎಂ.ಎಲ್ 33 ವಿಸ್ಕಿ ಬಾಟಲಿಗಳನ್ನು ಕಳವು ಮಾಡಿದ್ದಾರೆ. ಈ ಘಟನೆ ಎ.10ರಂದು ಬೆಳಕಿಗೆ ಬಂದಿದೆ. ಇವುಗಳ ಒಟ್ಟು ಮೌಲ್ಯ 15,457 ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News