×
Ad

ಕೊರೋನ ವೈರಸ್ : ಕೇಂದ್ರ-ರಾಜ್ಯ ಸರಕಾರದಕ್ಕೆ 12 ಬೇಡಿಕೆ ಮುಂದಿಟ್ಟ ವಿಮೆನ್ ಇಂಡಿಯಾ ಮೂವ್‌ಮೆಂಟ್

Update: 2020-04-13 22:34 IST

ಮಂಗಳೂರು, ಎ.13: ಕೊರೋನ ವೈರಸ್ ರೋಗದ ತಡೆಗಾಗಿ ಜಗತ್ತಿನಾದ್ಯಂತ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿರುವ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ಎರಡು ಬಾರಿ ಭಾಷಣ ಮಾಡಿ ಚಪ್ಪಾಳೆ ತಟ್ಟಲು ಮತ್ತು ಮೊಂಬತ್ತಿ ಉರಿಸಲು ಮನವಿ ಮಾಡಿದ್ದಾರೆ. ಇದನ್ನು ಮೋದಿಯ ಅಭಿಮಾನಿಗಳು ಅತಿರೇಕಗೊಳಿಸಿದ್ದಾರೆಯೇ ವಿನಃ ಕಾರ್ಯರೂಪಕ್ಕೆ ತಂದಿಲ್ಲ. ಪ್ರಧಾನಿ ಭಾಷಣಕ್ಕೆ ಸೀಮಿತರಾಗದೆ ಕೊರೋನ ವಿರುದ್ಧ ಕಾರ್ಯರೂಪಕ್ಕೆ ತರುವಂತಹ ಪ್ರಯತ್ನ ಮಾಡಲಿ ಮತ್ತು 12 ಬೇಡಿಕೆಯನ್ನು ಈಡೇರಿಸಬೇಕು ಎಂದು ವಿಮೆನ್ ಇಂಡಿಯಾ ಮೂವ್‌ಮೆಂಟ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ಲೀಂ ಆಗ್ರಹಿಸಿದ್ದಾರೆ.

*ಕೂಲಿ ಕಾರ್ಮಿಕರಿಗೆ, ನಿರಾಶ್ರೀತರಿಗೆ, ಬೀದಿಬದಿ ವ್ಯಾಪಾರಿಗಳಿಗೆ ಉಚಿತ ಅಕ್ಕಿ ಅಥವಾ ಅನ್ನಾಹಾರವನ್ನು ಒದಗಿಸಲು ಯೋಜನೆ ರೂಪಿಸಬೇಕು.
*ವಲಸೆ ಕಾರ್ಮಿಕರು ಊರಿಗೆ ಹೋಗಲಾಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಬಗ್ಗೆ ಗಮನಹರಿಸಿ ಅವರವರ ಊರಿಗೆ ಮರಳಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
*ಅಂಗಡಿಗಳಲ್ಲಿ ಜನದಟ್ಟಣೆ ತಡೆಯಲು ಸ್ಥಳೀಯ ಸಂಘಸಂಸ್ಥೆಗಳ ಸಹಾಯ ಪಡೆದು ಆಹಾರವನ್ನು ಮನೆ ಮನೆಗೆ ಮುಟ್ಟಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು.
*ದಿನಸಿ ವ್ಯಾಪಾರಿಗಳಿಗೆ ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಪಾಸ್ ನೀಡುವ ಕ್ರಮವನ್ನು ವ್ಯವಸ್ಥಿತವಾಗಿ ಮಾಡಬೇಕು.
*ಎಪಿಎಲ್/ ಬಿಪಿಎಲ್ ಹಾಗೂ ಎಲ್ಲಾ ಮಧ್ಯಮ ವರ್ಗದವರ ಬಗ್ಗೆ ಕಾಳಜಿ ವಹಿಸಿ ಯೋಜನೆ ರೂಪಿಸಬೇಕು.
*ಪಡಿತರ ಅಂಗಡಿಗಳಲ್ಲಿ ಅಕ್ಕಿ ಮತ್ತು ಬೇಳೆಯನ್ನು ನಿಗದಿತ ಪ್ರಮಾಣದಲ್ಲಿ ವಿತರಿಸಬೇಕು. ಸೀಮಿತಗೊಳಿಸದೇ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು.
 *ವೈದ್ಯಕೀಯ ಸಿಬ್ಬಂದಿ ವರ್ಗಕ್ಕೆ ಸೂಕ್ತ ಭದ್ರತಾ ಸೌಲಭ್ಯಗಳನ್ನು ಒದಗಿಸಬೇಕು.
*ಕಂದಮ್ಮಗಳಿಗೆ ಪೌಷ್ಟಿಕಾಹಾರ ನೀಡುವ ಸಲುವಾಗಿ ಕ್ರಮಗಳನ್ನು ಕೈಗೊಳ್ಳಬೇಕು.
*ಇತರ ರೋಗಿಗಳನ್ನು ಹಾಗೂ ಗರ್ಭಿಣಿಯರನ್ನು ಶುಶ್ರೂಷೆಗೆ ಒಳಪಡಿಸಲು ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಸಜ್ಜುಗೊಳಿಸಲು ನಿರ್ದೇಶನ ನೀಡಬೇಕು.
*ವೈರಸ್‌ನ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನಕಾರಿಯಾಗಿ ಪೋಸ್ಟ್ ಹಾಕುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಮಾಧ್ಯಮಗಳಲ್ಲಿ ಬರುವ ಕಪೋಲ ಕಲ್ಪಿತ ವರದಿಗಳಿಗೆ ನಿಯಂತ್ರಣ ಹೇರಬೇಕು.
*ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಅಮೇರಿಕಾ ಮತ್ತು ಇನ್ನಿತರ ದೇಶಗಳಿಗೆ ರಫ್ತು ಮಾಡುವ ಮೊದಲು ಭಾರತೀಯರಿಗೆ ಬೇಕಾಗುವಷ್ಟು ದಾಸ್ತಾನನ್ನು ಖಾತ್ರಿಪಡಿಸಬೇಕು.
*ವಿದೇಶಗಳಲ್ಲಿ ಬಾಕಿಯಾಗಿರುವ ಅನಿವಾಸಿ ಭಾರತೀಯರನ್ನು ಕರೆ ತರುವ ನಿಟ್ಟಿನಲ್ಲಿ ಕೂಡ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News