ಕಾರ್ಪೊರೇಟರ್ ಗಣೇಶ್ ಕುಲಾಲ್‌ರಿಂದ ಕಿಟ್ ವಿತರಣೆ
Update: 2020-04-13 22:37 IST
ಮಂಗಳೂರು, ಎ.13: ಮನಪಾ ಕಾರ್ಪೊರೇಟರ್ ಗಣೇಶ್ ಕುಲಾಲ್ ಕಳೆದ ಎರಡು ವಾರಗಳಿಂದ ವಾರ್ಡ್‌ನ ವಿವಿಧ ಪ್ರದೇಶಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ದಿನಸಿ ಕಿಟ್ ವಿತರಣೆ ಮಾಡುತ್ತಿದ್ದಾರೆ. ಈವರೆಗೆ ಸುಮಾರು 1,800 ಮಂದಿಗೆ ದಿನಸಿ ಕಿಟ್ ವಿತರಿಸಿದ್ದಾರೆ.
ಈ ಸಂದರ್ಭ ಅರುಣ್ ಕುಮಾರ್ ಉರ್ವ, ನಿತಿನ್ ಸುವರ್ಣ, ಸುಖಾಂತ್ ಪೂಜಾರಿ, ವಿಶ್ವನಾಥ ಪ್ರಭು, ಚಂದನ್ ಉರ್ವ, ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.
ಉಚಿತ ಆಹಾರ ವಿತರಣೆ: ಅಲ್ಲದೆ ಗಣೇಶ್ ಕುಲಾಲ್ ನೂರಕ್ಕೂ ಹೆಚ್ಚು ಮಂದಿಗೆ ಬೆಳಗ್ಗಿನ ಉಪಹಾರ, ಊಟ ಮತ್ತು ಸಂಜೆಯ ತಿಂಡಿಯನ್ನು ವಾರ್ಡಿನ ನಿರ್ಗತಿಕರಿಗೆ ನೀಡುತ್ತಿದ್ದಾರೆ. ಸ್ವತಃ ತನ್ನ ಮನೆಯಲ್ಲಿ ಆಹಾರವನ್ನು ಬೇಯಿಸಿ ಉರ್ವಸ್ಟೋರ್, ಲೇಡಿಹಿಲ್, ಉರ್ವ ಹಾಗೂ ಮಣ್ಣಗುಡ್ಡೆ ಸೇರಿದಂತೆ ಐದು ಕಡೆಗಳಲ್ಲಿ ಹಂಚುತ್ತಿದ್ದಾರೆ.
ಈ ಕಾರ್ಯಕ್ಕೆ ದಾನಿಗಳಲ್ಲದೆ ಪಂಚಮುಖಿ ಬಳಗ, ಉರ್ವ ಫ್ರೆಂಡ್ಸ್ ಸರ್ಕಲ್, ಕೊರಗಜ್ಜ ಕ್ಷೇತ್ರ, ನವದುರ್ಗ ಕ್ರಿಕೆಟರ್ಸ್ ಕೈಜೋಡಿಸಿವೆ.