×
Ad

ಮಂಗಳೂರು: ದಸಂಸದಿಂದ ಅಂಬೇಡ್ಕರ್ ಜಯಂತಿ ಆಚರಣೆ

Update: 2020-04-14 13:43 IST

ಮಂಗಳೂರು, ಎ.14: ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜನ್ಮದಿನಾಚರಣೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ) ಮಂಗಳೂರು ತಾಲೂಕು ಸಮಿತಿಯ ವತಿಯಿಂದ ಕರಂಬಾರಿನಲ್ಲಿ ಮಂಗಳವಾರ ಬೆಳಗ್ಗೆ ಸರಳವಾಗಿ ಆಚರಿಸಲಾಯಿತು.

ದಸಂಸ ತಾಲೂಕು ಸಂಚಾಲಕ ರುಕ್ಮಯ ಕಟೀಲ್ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿದರು. ಸಂವಿಧಾನದ ಪೀಠಿಕೆಯನ್ನು ಓದಿ ಅಂಬೇಡ್ಕರ್‌ ಅವರ ಆಶಯಗಳನ್ನು ತಿಳಿಸಿದರು.

ದೇಶದಾದ್ಯಂತ ಕೊರೋನ ವೈರಸ್ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಈ ವರ್ಷ ಕಾರ್ಯಕ್ರಮವನ್ನು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ ಆಚರಿಸುತ್ತಿದ್ದು, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ದೇಶದ ಜಾತ್ಯತೀತ ಪರಂಪರೆಯನ್ನು ಉಳಿಸಿ ಸಂವಿಧಾನವನ್ನು ರಕ್ಷಿಸುವುದರೊಂದಿಗೆ ದೇಶದ ಐಕ್ಯ ಕಾಪಾಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ದಸಂಸ ತಾಲೂಕು ಸಂಘಟನಾ ಸಂಚಾಲಕರಾದ ಕೃಷ್ಣ ಕೆ.ಎಕ್ಕಾರ್, ರುಕ್ಕಯ್ಯ ಕರಂಬಾರ್, ಸುರೇಶ್ ಬೆಳ್ಳಾಯರ್, ರವಿ ಎಸ್. ಪೇಜಾವರ, ಉಮೇಶ್ ಕರಂಬಾರ್, ಕರಂಬಾರ್ ಗ್ರಾಮ ಸಂಚಾಲಕ ರಮೇಶ್ ಸುವರ್ಣ, ಸಂಘಟನಾ ಸಂಚಾಲಕ ರಾಕೇಶ್ ಕರಂಬಾರ್, ನವೀನ್ ಸಾಲ್ಯಾನ್ ಕರಂಬಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News