ಪ್ರಧಾನಿ ಘೋಷಣೆ ಡೆನ್ಮಾರ್ಕ್ ಪ್ರಿನ್ಸ್ ಇಲ್ಲದ ಹ್ಯಾಮ್ಲೆಟ್ ನಾಟಕ : ಸಿಂಘ್ವಿ
Update: 2020-04-14 13:49 IST
ಹೊಸದಿಲ್ಲಿ, ಎ.14: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಲಾಕ್‌ಡೌನ್ ಅವಧಿ ವಿಸ್ತರಣೆಯ ಘೋಷಣೆ 'ಡೆನ್ಮಾರ್ಕ್ ಪ್ರಿನ್ಸ್ ಇಲ್ಲದ ಹ್ಯಾಮ್ಲೆಟ್ ನಾಟಕ'ದಂತೆ ಇದೆ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಪ್ರತಿಕ್ರಿಯೆ ನೀಡಿದ್ದಾರೆ
ವಿಲಿಯಂ ಷೇಕ್ಸ್ ಪಿಯರ್ ರಚಿಸಿರುವ ಹ್ಯಾಮ್ಲೆಟ್ ನಾಟಕದಲ್ಲಿ ಡೆನ್ಮಾರ್ಕ್ ಯುವರಾಜನೇ ನಾಟಕದ ಮುಖ್ಯ ಪಾತ್ರಧಾರಿ. ಇದೀಗ ಪ್ರಧಾನಿ ಮೋದಿ ಅವರ ಲಾಕ್‌ಡೌನ್ ಅವಧಿ ವಿಸ್ತರಿಸುವ ಘೋಷಣೆಯಲ್ಲಿ ಮಾರ್ಗಸೂಚಿಗಳೆಂಬ ಮುಖ್ಯ ಪಾತ್ರಧಾರಿಯೇ ಇಲ್ಲ ಎಂದು ಸಿಂಘ್ವಿ ವ್ಯಂಗ್ಯವಾಡಿದ್ದಾರೆ.
ಮೇ 3ರ ತನಕ ಲಾಕ್ ಡೌನ್ ವಿಸ್ತರಿಸುವ ಘೋಷಣೆಯನ್ನು ಮಾಡಿರುವ ಪ್ರಧಾನಿ ಮೋದಿ ಮಾರ್ಗಸೂಚಿ ಆದೇಶವನ್ನು ಬುಧವಾರ ಹೊರಡಿಸುವುದಾಗಿ ಹೇಳಿದ್ದರು.