"ನನ್ನ ಪ್ರೀತಿಯ ದೇಶವೇ, ಅಳು": ಲಾಕ್ ಡೌನ್ ವಿಸ್ತರಣೆಗೆ ಪಿ.ಚಿದಂಬರಂ ಪ್ರತಿಕ್ರಿಯೆ

Update: 2020-04-14 09:40 GMT

ಹೊಸದಿಲ್ಲಿ, ಎ.14:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲಾಕ್ ಡೌನ್  ಅವಧಿಯನ್ನು ಮೇ 3ರ ತನಕ ವಿಸ್ತರಣೆ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ "ನನ್ನ ಪ್ರೀತಿಯ ದೇಶವೇ, ಅಳು" ಟ್ವೀಟ್ ಮಾಡಿದ್ದಾರೆ.

"21 + 19 ದಿನಗಳವರೆಗೆ ಬಡವರಿಗೆ ತಮ್ಮ ಅಗತ್ಯಗಳನ್ನು ತಾವೇ ಪೂರೈಸಲು  ಬಿಡಲಾಗಿದೆ. ಸರಕಾರದ ಕೈಯಲ್ಲಿ ಹಣ, ಆಹಾರ ಎಲ್ಲವೂ ಇದೆ. ಆದರೆ ಯಾವುದನ್ನು ಬಿಡುಗಡೆ ಮಾಡುತ್ತಿಲ್ಲ.  ಹಣಕಾಸಿನ ನೆರವಿಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮಾಡಿರುವ ಮನವಿಗೂ ಕೇಂದ್ರ ಸರಕಾರ ಸ್ಪಂದಿಸಿಲ್ಲ. ಹೀಗಾಗಿ ನನ್ನ ಪ್ರೀತಿಯ ದೇಶವೆ ಅಳು ಎಂದು ಚಿದಂಬರಂ ಹೇಳಿದ್ದಾರೆ.

ಲಾಕ್‌ಡೌನ್ ವಿಸ್ತರಿಸಬೇಕಾದ ಅನಿವಾರ್ಯತೆ ನಮಗೆ ಅರ್ಥವಾಗುತ್ತದೆ. ನಾವು ಪ್ರಧಾನಿಯವರ ನಿರ್ಧಾರವನ್ನು ಬೆಂಬಲಿಸುತ್ತೇವೆ. ಆದರೆ ಜನರ ಕಷ್ಟ ಯಾಕೆ ಸರಕಾರಕ್ಕೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಆರ್‌ಬಿಐನ ಮಾಜಿ ಮುಖ್ಯಸ್ಥ ರಘುರಾಮ್ ರಾಜನ್, ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ, ಜೀನ್ ಡ್ರೆಜ್ ಮತ್ತು ಪ್ರಭಾತ್ ಪಟ್ನಾಯಕ್ ಅವರಂತಹ ತಜ್ಞರ ಸಲಹೆಗಳಿಗೆ ಸರಕಾರ ಕಿವುಡಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News