×
Ad

ಗಡಿ ತೆರವಿಗೆ ವಿರೋಧಕ್ಕೆ ಎಸ್‌ಡಿಪಿಐ ಖಂಡನೆ

Update: 2020-04-14 14:29 IST

ಮಂಗಳೂರು, ಎ.14: ಕೊರೋನ ವೈರಸ್ ಹಾವಳಿಯ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಪಂಚವೇ ಜಾತಿ ಧರ್ಮ, ಪಕ್ಷ,ರಾಜಕೀಯ ಸಿದ್ಧಾಂತವನ್ನು ಮರೆತು ಒಂದಾಗಿ ಹೋರಾಟ ಮಾಡುತ್ತಿರುವ ಮಧ್ಯೆಯೇ ಕರ್ನಾಟಕ-ಕೇರಳ ಗಡಿಯ ತೆರವಿಗೆ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ ಎಂದು ದ.ಕ. ಜಿಲ್ಲಾ ಎಸ್‌ಡಿಪಿಐ ಹೇಳಿಕೆಯಲ್ಲಿ ತಿಳಿಸಿದೆ.

ಮಂಗಳೂರು-ಕಾಸರಗೋಡು ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ. ಶಿಕ್ಷಣ, ವ್ಯಾಪಾರ, ವೈದ್ಯಕೀಯ ನೆರವು ಸಹಿತ ಎಲ್ಲಾ ವಿಧದಲ್ಲಿ ಕೂಡ ಪರಸ್ಪರ ಅವಲಂಬನೆಗೆ ಒಳಗಾಗಿದೆ. ಕೊರೋನ ಹಿನ್ನೆಲೆಯಲ್ಲಿ ಲಾಕ್‌ಡೌನ್ ಹೇರಿ ಉಭಯ ಜಿಲ್ಲೆಗಳ ಸಂಪರ್ಕ ಕಡಿತಗೊಳಿಸಿರುವುದು ಸ್ವಾಗತಾರ್ಹವಾಗಿದ್ದರೂ ಕೂಡ ತುರ್ತು ವೈದ್ಯಕೀಯ ನೆರವಿಗಾಗಿ ಗಡಿ ತೆರವುಗೊಳಿಸಬೇಕಾದುದು ಅನಿವಾರ್ಯ. ಆದರೆ ಇದನ್ನು ವಿರೋಧಿಸುವುದು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿರುತ್ತದೆ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News