×
Ad

ಮಂಗಳೂರು: 'ವಾರಿಯರ್ ಆಫ್ ದಿ ಡೇ’ ಆಗಿ ಸಂತೋಷ್ ಪಡೀಲ್ ಆಯ್ಕೆ

Update: 2020-04-14 22:09 IST

ಮಂಗಳೂರು, ಎ.14: ಕೊರೋನ ಹಿನ್ನೆಲೆಯಲ್ಲಿ ನಗರದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವ ಸಂದರ್ಭ ಉತ್ತಮ ಕಾರ್ಯನಿರ್ವಹಿಸಿದ ಓರ್ವ ಪೊಲೀಸ್ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತರು ‘ದಿನದ ಕೊವಿಡ್ ವಾರಿಯರ್’ ಎಂದು ಗೌರವಿಸಲಿದ್ದಾರೆ.

ಅದರಂತೆ ಮಂಗಳವಾರ ಕದ್ರಿ ಠಾಣೆಯ ಎಎಸ್‌ಐ ಸಂತೋಷ್ ಪಡೀಲ್ ಅವರನ್ನು ‘ವಾರಿಯರ್ ಆಫ್ ದಿ ಡೇ’ ಎಂದು ಗುರುತಿಸಲಾಗಿದೆ. ಸಂತೋಷ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಕೇರಳ ಮೂಲದ ಮಗುವಿಗೆ ಮೆಡಿಕಲ್ ವ್ಯವಸ್ಥೆ ಕಲ್ಪಿಸಿ ತನ್ನ ವಾಹನದಲ್ಲೇ ತಲಪಾಡಿ ಗಡಿ ದಾಟಿಸುವ ಮೂಲಕ‌ ಹೆತ್ತವರ ಮಡಿಲಿಗೆ ಒಪ್ಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News