×
Ad

ಈ ವರ್ಷ ಸಾಮಾನ್ಯ ಮಳೆಯಾಗಲಿದೆ :ಐಎಂಡಿ

Update: 2020-04-15 15:05 IST

 ಹೊಸದಿಲ್ಲಿ, ಎ.15:  ಈ ವರ್ಷ ಸಾಮಾನ್ಯ ಮಳೆಯಾಗಲಿದೆ ಎಂದು ಭಾರತದ  ಹವಾಮಾನ ಇಲಾಖೆ (ಐಎಂಡಿ) ಬುಧವಾರ ತಿಳಿಸಿದೆ.

ಐಎಮ್‌ಡಿ ಮಹಾನಿರ್ದೇಶಕ ಎಂ.ಮೊಹಾಪಾತ್ರಾ ಅವರು  ಮುಂಗಾರು  ದೀರ್ಘಾವಧಿಯ ಸರಾಸರಿ (ಎಲ್‌ಪಿಎ) ಶೇಕಡಾ 100 ರಷ್ಟು ಇರುತ್ತದೆ. ಅದು ‘ಸಾಮಾನ್ಯ’ ವಿಭಾಗದಲ್ಲಿ ಬರುತ್ತದೆ.

4 ತಿಂಗಳ  ಮುಂಗಾರು  ಮಳೆ ಸಾಮಾನ್ಯವಾಗಲಿದೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್ ಹೇಳಿದ್ದಾರೆ. ಈ ವರ್ಷದಿಂದ ಮಾನ್ಸೂನ್ ಪ್ರಾರಂಭ ಮತ್ತು ವಾಪಸಾತಿ ದಿನಾಂಕಗಳನ್ನು ಪರಿಷ್ಕರಿಸಲಾಗಿದೆ. ಆದಾಗ್ಯೂ, ಜೂನ್ 1 ರಂದು ಕೇರಳದಲ್ಲಿ ಮುಂಗಾರು ಪ್ರಾರಂಭವಾಗಲಿದೆ.ಪ್ರಾರಂಭದ  ದಿನಾಂಕದಲ್ಲಿ ಬದಲಾವಣೆಯಾಗಿಲ್ಲ ಎಂದು ಭಾರತದ  ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News