ಡಬ್ಲ್ಯಎಚ್‌ಒ ಬಲಪಡಿಸುವುದು ಇಂದಿನ ಅಗತ್ಯ: ಜರ್ಮನಿ

Update: 2020-04-15 16:01 GMT

ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕದ ದೇಣಿಗೆಯನ್ನು ನಿಲ್ಲಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿರ್ಧಾರವನ್ನು ಜರ್ಮನಿ ಟೀಕಿಸಿದೆ ಹಾಗೂ ಕೊರೋನವೈರಸ್ ಬಿಕ್ಕಟ್ಟಿಗೆ ‘ಇತರರನ್ನು ದೂಷಿಸಬಾರದು’ ಎಂದು ಹೇಳಿದೆ.

‘‘ಇತರರನ್ನು ದೂರುವುದರಿಂದ ಏನೂ ಪ್ರಯೋಜನವಿಲ್ಲ’’ ಎಂದು ಜರ್ಮನಿ ವಿದೇಶ ಸಚಿವ ಹೈಕೊ ಮಾಸ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ವಿಶ್ವಸಂಸ್ಥೆಯನ್ನು, ಅದರಲ್ಲೂ ಮುಖ್ಯವಾಗಿ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಯನ್ನು ಬಲಪಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News