ಕೊರೋನ ವೈರಸ್: 1.29 ಲಕ್ಷ ಸಮೀಪಿಸಿದ ಸಾವಿನ ಸಂಖ್ಯೆ
Update: 2020-04-15 22:11 IST
ಲಂಡನ್, ಎ. 15: ನೋವೆಲ್-ಕೊರೋನವೈರಸ್‌ನಿಂದಾಗಿ ಜಗತ್ತಿನಾದ್ಯಂತ ಬುಧವಾರ ಸಂಜೆಯ ವೇಳೆಗೆ 1,28,972 ಮಂದಿ ಮೃತಪಟ್ಟಿದ್ದಾರೆ. ಅದೇ ವೇಳೆ, ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 20,24,676ನ್ನು ತಲುಪಿದೆ.
ಮೃತರ ಸಂಖ್ಯೆಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, 26,164 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಇಟಲಿಯಿದ್ದು, ಅಲ್ಲಿ 21,067 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಮೂರನೇ ಸ್ಥಾನದಲ್ಲಿರುವ ಸ್ಪೇನ್‌ನಲ್ಲಿ 18,579 ಮಂದಿ ಬಲಿಯಾಗಿದ್ದಾರೆ. ಫ್ರಾನ್ಸ್‌ನಲ್ಲಿ 15,720 ಮಂದಿ ಮೃತಪಟ್ಟರೆ, ಬ್ರಿಟನ್‌ನಲ್ಲಿ 12,868 ಮಂದಿ ಮೃತಪಟ್ಟಿದ್ದಾರೆ.