ಕೋವಿಡ್-19 ಕುರಿತ ತಪ್ಪು ಮಾಹಿತಿ ವಿರುದ್ಧ ಗುಟೆರಸ್ ಎಚ್ಚರಿಕೆ

Update: 2020-04-15 17:06 GMT

ವಿಶ್ವಸಂಸ್ಥೆ, ಎ. 15: ವಾಟ್ಸ್‌ಆ್ಯಪ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಕೋವಿಡ್-19 ಕುರಿತು ತಪ್ಪು ಮಾಹಿತಿಗಳು ಹರಿದಾಡುತ್ತಿವೆ ಎಂದು ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಎಚ್ಚರಿಸಿದ್ದಾರೆ.

ಅದೇ ವೇಳೆ, ಹೆಚ್ಚಿನ ಜೀವಗಳನ್ನು ಅಪಾಯಕ್ಕೆ ಗುರಿಪಡಿಸುವ ಈ ಅಪಪ್ರಚಾರದ ‘ವಿಷ’ವನ್ನು ಎದುರಿಸಲು ವಾಸ್ತವಾಂಶಗಳು ಮತ್ತು ವಿಜ್ಞಾನವನ್ನೊಳಗೊಂಡ ಮಾಹಿತಿಗಳನ್ನು ಇಂಟರ್‌ನೆಟ್‌ಗೆ ಹರಿಯಬಿಡಲು ವಿಶ್ವಸಂಸ್ಥೆ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News