×
Ad

ಮಂಗಳೂರು: ‘ವಾರಿಯರ್ ಆಫ್ ದಿ ಡೇ’ ಆಗಿ ಸೋಮನ ಗೌಡ ಚೌಧುರಿ ಆಯ್ಕೆ

Update: 2020-04-15 23:06 IST

ಮಂಗಳೂರು, ಎ.15: ಕೊರೋನ ಹಿನ್ನೆಲೆಯಲ್ಲಿ ನಗರದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವ ಸಂದರ್ಭ ಉತ್ತಮವಾಗಿ ಕಾರ್ಯನಿರ್ವಹಿಸಿದ ಓರ್ವ ಪೊಲೀಸ್ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತರು ದಿನದ ಕೊವಿಡ್ ವಾರಿಯರ್ ಎಂದು ಗೌರವಿಸಲಿದ್ದಾರೆ. ಅದರಂತೆ ಬುಧವಾರದ ‘ವಾರಿಯರ್ ಆಫ್ ದಿ ಡೇ’ ಆಗಿ ಮಂಗಳೂರು ಸಿಎಆರ್ ಕಾನ್ಸ್‌ಟೇಬಲ್ ವಿಜಯಪುರ ಮೂಲದ ಸೋಮನ ಗೌಡ ಚೌಧುರಿ ಆಯ್ಕೆಯಾಗಿದ್ದಾರೆ.

ಕಳೆದ ಹಲವು ವರ್ಷದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ)ನ ಜೊತೆಗೂಡಿ ಸೋಮನ ಗೌಡ ಅವರು ತನ್ನ ಹಣದಿಂದ 21 ಅರ್ಹ ಕುಟುಂಬಗಳಿಗೆ ಅಕ್ಕಿ ಮತ್ತು ದಿನಸಿ ಸಾಮಗ್ರಿಯನ್ನು ವಿತರಿಸಿದ್ದಾರೆ. ಇದನ್ನು ಪರಿಗಣಿಸಿ ಪೊಲೀಸ್ ಆಯುಕ್ತರು ‘ವಾರಿಯರ್ ಆಫ್ ದಿ ಡೇ’ಗೆ ಸೋಮನ ಗೌಡ ಚೌಧುರಿಯನ್ನು ಆಯ್ಕೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News