ಪದವು ನಿರಾಶ್ರಿತ ಕೇಂದ್ರಕ್ಕೆ ಮೇಯರ್ ನೇತೃತ್ವದ ತಂಡ ಭೇಟಿ

Update: 2020-04-16 07:53 GMT

ಮಂಗಳೂರು, ಎ.16: ಕೋವಿಡ್-19 ಸೋಂಕಿನ ಹಿನ್ನೆಲ್ಲೆಯಲ್ಲಿ ನಿರಾಶ್ರಿತರಾಗಿರುವವರು, ಭಿಕ್ಷುಕರಿಗೆ ನಗರದ ಪದವು ಬಳಿಯ ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗಿದೆ. ಮೇಯರ್ ದಿವಾಕರ್ ಪಾಂಡೇಶ್ವರ ನೇತೃತ್ವದ ಮನಪಾ ಅಧಿಕಾರಿಗಳ ತಂಡ ಇಂದು ಕೇಂದ್ರಕ್ಕೆ ಭೇಟಿ ನೀಡಿತು.

ಅಲ್ಲಿ ನಿರಾಶ್ರಿತರಿಗೆ ಮಾಡಲಾದ ಊಟೋಪಚಾರದ ವ್ಯವಸ್ಥೆಯನ್ನು ತಂಡ ಪರಿಶೀಲಿಸಿತು.

‘‘ಲಾಕ್‌ಡೌನ್ ಆರಂಭದ ದಿನಗಳಿಂದಲೂ ಇಲ್ಲಿ ಬ್ಯಾಂಕ್ ಆಫ್ ಬರೋಡಾದ ನೌಕರರು ಮತ್ತು ಸಿಬ್ಬಂದಿ ಪ್ರಾಯೋಜಕತ್ವದಲ್ಲಿ ನಿರಾಶ್ರಿತರಿಗೆ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಅವರೇ ಅಡುಗೆಯವರನ್ನು ಇರಿಸಿ ಅಲ್ಲಿಯೇ ಗುಣಮಟ್ಟದ ಆಹಾರವನ್ನು ತಯಾರಿಸಿ ನೀಡುತ್ತಿದ್ದಾರೆ. ಆರಂಭದಲ್ಲಿ ಸುಮಾರು 330ಕ್ಕೂ ಅಧಿಕ ನಿರಾಶ್ರಿತರಿದ್ದು, ಪ್ರಸ್ತುತ ಸುಮಾರು 200ರಷ್ಟು ಮಂದಿಗೆ ಪ್ರತಿನಿತ್ಯ ಉಟೋಪಚಾರವನ್ನು ಒದಗಿಸಲಾಗುತ್ತಿದೆ’’ ಎಂದು ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.

ಪಾಲಿಕೆ ಉಪ ಆಯುಕ್ತ ಡಾ. ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News