ಇಟಲಿಗೆ ದೇಣಿಗೆ ನೀಡಿದ ಜೊಕೊವಿಕ್‌ಗೆ ಶ್ಲಾಘನೆ

Update: 2020-04-16 09:10 GMT

ವಾಷಿಂಗ್ಟನ್, ಎ.15: ಇಟಲಿಯಲ್ಲಿ ಕೊರೋನ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ದೇಣಿಗೆ ನೀಡಿ ಸಹಾಯಹಸ್ತ ಚಾಚಿರುವ ಸರ್ಬಿಯದ ಟೆನಿಸ್ ತಾರೆ ನೊವಾಕ್ ಜೊಕೊವಿಕ್‌ಗೆ ಸ್ಥಳೀಯ ಆರೋಗ್ಯ ಪ್ರಾಧಿಕಾರದ ಪ್ರಧಾನ ನಿರ್ದೇಶಕರು ಶ್ಲಾಘಿಸಿದರು.

‘‘ನಮ್ಮ ಬ್ಯಾಂಕ್ ಖಾತೆಯಲ್ಲಿ ಇಂತಹ ಪ್ರತಿಷ್ಠಿತ ವ್ಯಕ್ತಿಯಿಂದ ದೇಣಿಗೆಯನ್ನು ನಿರೀಕ್ಷಿಸಿರಲಿಲ್ಲ. ದೇಣಿಗೆದಾರರ ಹೆಸರನ್ನು ಓದುವಾಗ ವಿಶ್ವಶ್ರೇಷ್ಠ ಟೆನಿಸ್ ಆಟಗಾರನ ಹೆಸರಿತ್ತು. ಆ ಹೆಸರು ಓದಿ ಭಾವುಕನಾದೆ’’ ಎಂದು ಪೀಟರ್ ಅಸೆಂಬರ್ಗ್ ತಿಳಿಸಿದ್ದಾರೆ.

ಜೊಕೊವಿಕ್ ನೀಡಿರುವ ದೇಣಿಗೆಯನ್ನು ವೆಂಟಿಲೇಟರ್‌ಗಳು ಹಾಗೂ ಇತರ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಲು ಬಳಸಲಾಗಿದೆ. ಜೊಕೊವಿಕ್,ಅವರ ಪತ್ನಿ ಹಾಗೂ ಅವರ ಪ್ರತಿಷ್ಠಾನವು ಇತ್ತೀಚೆಗೆ ಸರ್ಬಿಯದ ಆಸ್ಪತ್ರೆಗಳಿಗೆ 1 ಮಿಲಿಯನ್ ಯುರೋಸ್(ಸುಮಾರು 1.1 ಮಿಲಿಯನ್ ಡಾಲರ್)ದೇಣಿಗೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News