×
Ad

ಪುತ್ತೂರು: ಅಕ್ರಮ ಕಳ್ಳ ಬಟ್ಟಿ ತಯಾರಿ; ಆರೋಪಿ ಬಂಧನ

Update: 2020-04-16 19:01 IST

ಪುತ್ತೂರು, ಎ. 16: ಪಡುವನ್ನೂರು ಗ್ರಾಮದ ಮಾಪಳದಲ್ಲಿ ಅಕ್ರಮವಾಗಿ ಕಳ್ಳ ಬಟ್ಟಿ ತಯಾರಿಸುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಅರಿಯಡ್ಕ ಗ್ರಾಮದ ಶರತ್ ಕುಮಾರ್ ಬಂಧಿತ ಆರೋಪಿ. ಗ್ರಾಮಾಂತರ ಠಾಣಾ ಸಬ್ ಇನ್ಸ್‍ಪೆಕ್ಟರ್ ಉದಯರವಿ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ದಾಳಿಯ ಸಂದರ್ಭದಲ್ಲಿ ಇನ್ನೋರ್ವ ಆರೋಪಿ ಕೇಶವ ಗೌಡ ತಪ್ಪಿಸಿಕೊಂಡಿದ್ದಾನೆ. ಸ್ಥಳದಿಂದ 2 ಲೀ. ಪ್ರಮಾಣದ ಕಳ್ಳ ಬಟ್ಟಿ ಸಾರಾಯಿ ಹಾಗೂ 200 ಲೀ. ಸಾಮಥ್ರ್ಯದ ಪ್ಲಾಸ್ಟಿಕ್ ಡ್ರಮ್, 100 ಲೀ. ಹುಳಿರಸ ಹಾಗೂ ಕಳ್ಳ ಬಟ್ಟಿ ತಯಾರಿಸಲು ಬಳಸಿದ ಪಾತ್ರೆ, ಹಾಗೂ 360 ರೂ. ವಶಪಡಿಸಿಕೊಂಡಿದ್ದಾರೆ.

ಆರೋಪಿ ವಿರುದ್ಧ ಕರ್ನಾಟಕ ಅಬಕಾರಿ ಕಾಯಿದೆ ಅನ್ವಯ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News