×
Ad

ಭಟ್ಕಳ ಅರ್ಬನ್ ಬ್ಯಾಂಕ್ ನಿಂದ ಸಿಎಂ ಪರಿಹಾರ ನಿಧಿಗೆ ರೂ.2ಲಕ್ಷ ದೇಣಿಗೆ

Update: 2020-04-16 19:13 IST

ಭಟ್ಕಳ: ರಾಜ್ಯದಲ್ಲಿ ಯಾವುದೇ  ರೀತಿಯ ಸಂಕಷ್ಟ ಎದುರಾದಾಗ ಸದಾ ಸ್ಪಂದಿಸುವ ರಾಜ್ಯದ ಪ್ರತಿಷ್ಟಿತ ಅರ್ಬನ ಬ್ಯಾಂಕ್ ಗಳಲ್ಲಿ ಒಂದಾದ ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಈ ಬಾರಿಯೂ ಕೊರೊನಾ ವೈರಸ್ ಸೋಂಕಿನಿಂದ ಎದುರಾದ ಸಂಕಷ್ಟಕ್ಕೆ ಸ್ಪಂದಿಸಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ.2 ಲಕ್ಷ ದೇಣಿಗೆಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದೆ.

ಅಲ್ಲದೇ ತಾಲೂಕಿನ ಅರ್ಹ ಫಲಾನುಭವಿಗಳಿಗೆ ಬ್ಯಾಂಕಿನ ನಿರ್ದೇಶಕರುಗಳ ಮೂಲಕ ಜೀವನಾವಶ್ಯಕ ವಸ್ತುಗಳಾದ ಬೆಣ್ತಕ್ಕಿ, ಕೊಚಗಕ್ಕಿ, ಸಕ್ಕರೆ, ರವಾ, ತೊಗರಿಬೇಳೆ, ಮೈದಾ, ಸೋಪ್, ಬೆಂಕಿಪೆಟ್ಟಿಗೆ, ಟೀ ಪೌಡರ್, ಪಾಮ್‍ಎಣ್ಣೆ, ಗೋದಿ ಹಿಟ್ಟು, ಇವುಗಳನ್ನೊಳಗೊಂಡ 355 ಪುಡ್‍ಕಿಟ್‍ಗಳನ್ನು ವಿತರಿಸುವ ಮೂಲಕ ದೇಶದೆಲ್ಲಡೆ ವ್ಯಾಪಿಸಿದ ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಲಾಕ್‍ಡೌನ್ ಘೋಷಿಸಿರುವುದರಿಂದ ಜನಸಾಮಾನ್ಯರ ದಿನನಿತ್ಯದ ಜೀವನ ನಿರ್ವಹಣೆ ಕ್ಲಿಷ್ಟಕರವಾಗಿರುವುದನ್ನು ಮನಗಂಡು ತಾಲೂಕಿನ ಸುತ್ತಮುತ್ತಲಿನ ಜನತೆಯ ಸಂಕಷ್ಟಕ್ಕೆ ಬ್ಯಾಂಕು ಸ್ಪಂದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News