ಝೂಮ್ ಮೀಟಿಂಗ್ ಆ್ಯಪ್ ಸುರಕ್ಷಿತವಲ್ಲ: ಸರಕಾರದ ಎಚ್ಚರಿಕೆ

Update: 2020-04-16 15:35 GMT

ಹೊಸದಿಲ್ಲಿ,ಎ.16: ಝೂಮ್ ಮೀಟಿಂಗ್ ಆ್ಯಪ್ ವೀಡಿಯೊ ಕಾನ್ಫರೆನ್ಸ್‌ಗೆ ಸುರಕ್ಷಿತ ವೇದಿಕೆಯಲ್ಲ ಎಂದು ಗುರುವಾರ ಎಚ್ಚರಿಕೆ ನೀಡಿರುವ ಸರಕಾರವು,ಆದಾಗ್ಯೂ ಖಾಸಗಿ ಉದ್ದೇಶಕ್ಕಾಗಿ ಝೂಮ್ ಬಳಸಲು ಬಯಸುವ ಖಾಸಗಿ ಬಳಕೆದಾರರ ಸುರಕ್ಷತೆಗಾಗಿ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.

ಝೂಮ್ ವ್ಯಕ್ತಿಗತ ಬಳಕೆಗೂ ಸುರಕ್ಷಿತ ವೇದಿಕೆಯಲ್ಲ ಎಂದು ಕೇಂದ್ರ ಗೃಹಸಚಿವಾಲಯವು ನೂತನ ಮಾರ್ಗದರ್ಶಿಯಲ್ಲಿ ತಿಳಿಸಿದೆ.

ಝೂಮ್ ಆ್ಯಪ್‌ನಲ್ಲಿ ಖಾಸಗಿತನ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಸಮಸ್ಯೆಗಳಿವೆ ಎಂದು ಗೃಹಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಟಿಕ್ ಟಾಕ್‌ನಂತಹ ಝೂಮ್‌ನ ಸರ್ವರ್‌ಗಳು ಹೆಚ್ಚಾಗಿ ಚೀನಾದಲ್ಲಿವೆ. ಈ ಆ್ಯಪ್ ಹ್ಯಾಕಿಂಗ್‌ಗೆ ಸುಲಭಭೇದ್ಯವಾಗಿದೆ ಮತ್ತು ಸಂಶಯಾಸ್ಪದ ಚಟುವಟಿಕೆಗಳಿಗೆ ಪೂರಕವಾಗಿದೆ ಎನ್ನುವುದು ಕೇಂದ್ರದ ಪ್ರತಿಪಾದನೆಯಾಗಿದೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದರು. ಪ್ರಮುಖ ಉದ್ಯಮ ಸಂಸ್ಥೆಗಳು,ಸರಕಾರಗಳು ಮತ್ತು ಗೌಪ್ಯತೆಯನ್ನು ಬಯಸುವ ಇತರರು ಈ ಸಾಫ್ಟ್‌ವೇರ್‌ನ್ನು ಬಳಸಬಾರದು ಎಂದು ಸೈಬರ್ ಘಟಕದ ಹಿರಿಯ ಅಧಿಕಾರಿಯೋರ್ವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News