ಭಟ್ಕಳ: ಪ್ರವೇಶ ನಿರ್ಬಂಧ ಖಂಡಿಸಿ ಆ್ಯಂಬುಲೆನ್ಸ್ ಚಾಲಕರ ಪ್ರತಿಭಟನೆ

Update: 2020-04-16 15:54 GMT

ಭಟ್ಕಳ, ಎ.16: ಉತ್ತರ ಕನ್ನಡ ಜಿಲ್ಲೆಯಿಂದ ತುರ್ತು ಸಂದರ್ಭದಲ್ಲಿಯೂ ಕೂಡ ಆ್ಯಂಬುಲೆನ್ಸ್ ಗಳನ್ನು ಉಡುಪಿ ಜಿಲ್ಲೆಗೆ ಬಿಡದ ಪರಿಣಾಮ ತಾಲೂಕಿನ ಆ್ಯಂಬುಲೆನ್ಸ್ ಚಾಲಕರು ಗುರುವಾರ ಪ್ರತಿಭಟನೆ ಮಾಡಿದರು.

ಉ.ಕ. ಜಿಲ್ಲಾಧಿಕಾರಿ ಪಾಸ್ ತೋರಿಸಿದರೂ ಅದಕ್ಕೆ ಕಿಮ್ಮತ್ತುಕೊಡದೇ ಉಡುಪಿ ಜಿಲ್ಲಾಧಿಕಾರಿಗಳ ಪಾಸ್ ತೋರಿಸಿ ಎನ್ನುತ್ತಿರುವುದು ಅಮಾನವೀಯ ಕೃತ್ಯವಾಗಿದೆ. ಈ ರೀತಿಯ ಕೃತ್ಯದಿಂದ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾ ನಿರತರು ಅಸಹಾಯಕತೆಯನ್ನು ತೋಡಿಕೊಂಡರು.

ಆ್ಯಂಬುಲೆನ್ಸ್‌ನಲ್ಲಿರುವ ಬರುವ ರೋಗಿಗಳನ್ನು ಉಡುಪಿ ಜಿಲ್ಲೆಯಗಡಿಯಲ್ಲಿ ವೈದ್ಯರೇ ಪರೀಕ್ಷಿಸಿ ತುರ್ತು ಅಗತ್ಯತೆ ಇದೆಯೇ ಎನ್ನುವುದುನ್ನು ಪರೀಕ್ಷಿಸಿ ಬಳಿಕ ಬಿಡಲಿ, ಆದರೆ, ಉಡುಪಿ ಜಿಲ್ಲಾಧಿಕಾರಿಗಳ ಆದೇಶ ಬೇಕು ಎಂದು ಅನಗತ್ಯ ವಿಳಂಬ ಮಾಡುವುದು ಎಷ್ಟು ಸರಿ ಎಂದು ಪ್ರತಿಭಟನಾ ನಿರತರು ಬೇಸರ ವ್ಯಕ್ತಪಡಿಸಿದರು.

ಹೃದಯ ಸ್ಥಂಭನ, ಮೆದುಳು ರಕ್ತಸ್ರಾವ, ಕ್ಲಿಷ್ಟಕರವಾದ ಹೆರಿಗೆ, ಅಫಘಾತ ಇಂತಹ ಸಂದರ್ಭದಲ್ಲಿ ಇವರ ಕಠಿಣ ನಿರ್ಧಾರ ತೀವ್ರ ಸಂಕಷ್ಟಕ್ಕೆ ಗುರಿಯಾಗಲಿದ್ದು, ಜನರು ಜೀವದ ಹಂಗು ತೊರೆದು ಪ್ರತಿಭಟನೆಗಿಳಿಯುವ ಮುನ್ನ ಉಭಯ ಜಿಲ್ಲಾಧಿಕಾರಿಗಳು, ಸರಕಾರ ಹಾಗೂ ನಮ್ಮ ಜನಪ್ರತಿನಿದಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

ಈ ಸಂದರ್ಭದಲ್ಲಿ ಎ.ಬಿ.ಎಮ್. ಪ್ರಧಾನ ಕಾರ್ಯದರ್ಶಿ ಅಬ್ದುಲ್‌ಖಾಲಿಕ್, ಚಾಲಕ ಶಬ್ಬೀರ, ವೇಲ್ಫೇರ್ ಹಾಸ್ಪಿಟಲ್ ಅಂಬ್ಯುಲೆನ್ಸ ಚಾಲಕ ಮುಸ್ತಾಕ್ ಅಹ್ಮದ್, ರಾಬಿತಾ ಸೊಸೈಟಿ ಆ್ಯಂಬುಲೆನ್ಸ ಚಾಲಕ ಅಮನುಲ್ಲಾ, ಸಮಾಜ ಸೇವಕ ಇರ್ಶಾದ ಸಿದ್ದಿಕ್ ಮತ್ತು ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News