ಮಂಗಳೂರು: ಮುಹಮ್ಮದ್ ಮಸೂದ್‌ರಿಂದ ಕಿಟ್ ವಿತರಣೆ

Update: 2020-04-16 17:25 GMT

ಮಂಗಳೂರು, ಎ.16: ವಿಧಾನ ಪರಿಷತ್ ಮಾಜಿ ಸದಸ್ಯ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಅವರ ವತಿಯಿಂದ ರಮಝಾನ್ ಕಿಟ್ಟನ್ನು ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಚೇರಿಯಲ್ಲಿ ವಿತರಿಸಲಾಯಿತು.

ಈ ಸಂದರ್ಭ ಕಮಿಟಿಯ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಸಿ.ಎಂ. ಹನೀಫ್, ಹಾಜಿ ಮೊಯಿದಿನ್ ಮೋನು, ಎನ್.ಕೆ. ಅಬೂಬಕ್ಕರ್, ಅದ್ದು ಹಾಜಿ, ಡಾ. ಅರೀಫ್ ಮಸೂದ್, ಅಬ್ದುಲ್ ರಝಾಕ್ ಅಮ್ಮೆಮಾರ್, ಕಾರ್ಪೊರೇಟರ್ ಶಂಸುದ್ಧೀನ್ ಕುದ್ರೋಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News