ಮಲ್ಪೆ ಪರಿಸರದ ಮೀನು ಮಾರಾಟಕ್ಕೆ ಕಲ್ಮಾಡಿ ಬಳಿ ತಾತ್ಕಾಲಿಕ ವ್ಯವಸ್ಥೆ

Update: 2020-04-16 17:25 GMT

ಉಡುಪಿ, ಎ.16: ಮಲ್ಪೆ ಪರಿಸರದಲ್ಲಿ ನಾಡದೋಣಿ ಮೂಲಕ ಹಿಡಿದ ಮೀನುಗಳಿಗೆ ತಾತ್ಕಾಲಿಕ ಮೀನು ಮಾರುಕಟ್ಟೆ ನಿರ್ಮಿಸಲು ಉಡುಪಿ ಮೀನು ಗಾರಿಕೆ ಇಲಾಖೆಯು ಗಳನ್ನು ಮಾರಾಟ ಮಾಡಲು ಕಲ್ಮಾಡಿ ಚರ್ಚ್ ಎದುರಿನ ಮೈದಾನವನ್ನು ಗುರುತಿಸಿದ್ದು, ಇಲ್ಲಿ ನಾಳೆಯಿಂದ ಮೀನು ಮಾರಾಟ ಆರಂಭಕ್ಕೆ ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ.

ಮಲ್ಪೆ, ಪಡುಕೆರೆ, ತೊಟ್ಟಂನಿಂದ 70-100 ನಾಡದೋಣಿಗಳು ಮೀನು ಗಾರಿಕೆಗೆ ತೆರಳುತ್ತಿದ್ದು, ಇವುಗಳಿಗೆ ಮೀನು ಖಾಲಿ ಮಾಡಲು ಪಡುಕೆರೆ ಹಾಗೂ ಕೋಡಿಬೆಂಗ್ರೆಯಲ್ಲಿ ಸ್ಥಳಗಳನ್ನು ಗುರುತಿಸಲಾಗಿದೆ. ಕೆಲವು ದೋಣಿ ಗಳು ಮಧ್ಯರಾತ್ರಿ ನಂತರ ನಸುಕಿನ ವೇಳೆ ಮೀನುಗಾರಿಕೆಗೆ ತೆರಳಿದರೆ, ಇನ್ನು ಕೆಲವು ಮೀನುಗಳು ಬೆಳಗಿನ ಜಾವ ಕಡಲಿಗೆ ಇಳಿಯುತ್ತವೆ.

ನಸುಕಿನ ವೇಳೆ ಮೀನುಗಾರಿಕೆಗೆ ತೆರಳಿದ ದೋಣಿಗಳು ಬೆಳಗ್ಗೆ 6-7ಗಂಟೆಗೆ ತೀರಕ್ಕೆ ಬಂದರೆ, ಬೆಳಗಿನ ಜಾವ ತೆರಳಿದ ದೋಣಿಗಳು ಬೆಳಗ್ಗೆ 8.30ರ ಸುಮಾರಿಗೆ ಇಳಿದಾಣ ತಲುಪುತ್ತವೆ. ಕೆಲವು ದೋಣಿಗಳಿಗೆ ಗರಿಷ್ಠ ಅಂದರೆ 20-25 ಮೀನುಗಳು ದೊರೆಯುತ್ತಿವೆ. ಇದರಲ್ಲಿ ಬಂಗುಡೆ, ಕಲ್ಲೂರು ಮೀನುಗಳು 10 ಕೆ.ಜಿ.ಯಷ್ಟು ಇರುತ್ತವೆ.

ಸದ್ಯ ದೋಣಿಗಳಲ್ಲಿ ಬಂಗುಡೆ, ಕಲ್ಲೂರು, ಮಿಕ್ಸ್ ಮೀನುಗಳು ದೊರೆಯು ತ್ತಿದ್ದು, ಆರಂಭದಲ್ಲಿ ಮೀನಿನ ದರ ದುಪ್ಪಟ್ಟು ಇದ್ದರೆ, 10ಗಂಟೆಯ ನಂತರ ಸಾಕಷ್ಟು ಇಳಿಕೆಯಾಗುತ್ತದೆ ಎನ್ನುತ್ತಾರೆ ನಾಡದೋಣಿ ಮೀನುಗಾರರು. ಇಲ್ಲಿ ರಖಂ ಮಾರಾಟಗಾರರಿಗೆ ಮಾತ್ರ ನೀಡಲಾಗುತ್ತದೆ. ಇಳಿದಾಣಗಳಿಂದ ತಂದ ಮೀನುಗಳನ್ನು ಕೆಲವರು ಅಲ್ಲಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದ್ದು, ಇದಕ್ಕೆ ಪೊಲೀಸರು ತಡೆಯೊಡ್ಡಿದ್ದಾರೆ.

ಈ ಕಾರಣದಿಂದ ಇದೀಗ ಕಲ್ಮಾಡಿ ಚರ್ಚ್ ಎದುರಿನ ಮೈದಾನದಲ್ಲಿ ತಾತ್ಕಾ ಲಿಕ ಮೀನು ಮಾರುಕಟ್ಟೆ ನಿರ್ಮಿಸಲು ಇಲಾಖೆ ನಿರ್ಧರಿಸಿದೆ. ಎಲ್ಲರು ಇಲ್ಲಿಯೇ ಮೀನುಗಳನ್ನು ಮಾರಾಟ ಮಾಡುವಂತೆ ಸೂಚಿಸಲಾಗಿದೆ. ಈ ನಿಟ್ಟಿ ನಲ್ಲಿ ಮೀನುಗಾರಿಕಾ ಇಲಾಖಾಧಿಕಾರಿಗಳು, ಮೀನುಗಾರಿಕಾ ಸಂಘ ಹಾಗೂ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಅಂತಿಮಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News