×
Ad

ಗುರುಪುರ: ಗುರುಪುರ ಗ್ರಾಮ ಕಾರ್ಯಪಡೆ ಸಭೆ

Update: 2020-04-16 23:00 IST

ಗುರುಪುರ, ಎ.16: ಕೊರೋನ ಸೋಂಕು ತಡೆಗಾಗಿ ಗುರುಪುರ ಗ್ರಾಪಂನಲ್ಲಿ ರಚಿಸಲಾದ ಗ್ರಾಮದ ಕಾರ್ಯಪಡೆಯ ವಾರದ ಸಭೆಯು ಗ್ರಾಪಂ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಗುರುವಾರಪಂಚಾಯತ್ ಆವರಣದಲ್ಲಿ ನಡೆಯಿತು.

ಸಭೆಯಲ್ಲಿ ಮಠದಗುಡ್ಡೆ ಸೈಟಿನ ಮುರುಕಲು ಮನೆಯಲ್ಲಿ ನಿರ್ವಸಿತರಿಗೆ ಕುಟುಂಬದ ಮೂವರಿಗೆ ಉಳಿದುಕೊಳ್ಳಲು ವ್ಯಕ್ತಿಯೊಬ್ಬ ವ್ಯವಸ್ಥೆ ಮಾಡಿರುವ ಘಟನೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಈ ಬಗ್ಗೆ ಆಶಾ ಕಾರ್ಯಕರ್ತೆಯರಿಂದ ವರದಿ ಪಡೆದು ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮೂಲಕ ನಿರ್ವಸಿತಗರನ್ನು ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸುವ ಹಾಗೂ ಅದಕ್ಕಿಂತ ಮುಂಚೆ ಆರೋಗ್ಯ ಸಿಬ್ಬಂದಿಯಿಂದ ಆರೋಗ್ಯ ತಪಾಸಣೆ ನಡೆಸಲು ಪಿಡಿಒ ಸಹಿತ ಕಾರ್ಯಪಡೆಯ ಸದಸ್ಯರು ನಿರ್ಣಯಿಸಿದರು.

ಗ್ರಾಮದ ಕಾಂಜಿಲಕೋಡಿ ಮತ್ತು ಪೊನ್ನೆಲದಲ್ಲಿ ಇತ್ತೀಚೆಗೆ ಗುರುತಿಸಲಾದ ಐದು ನಿರ್ವಸಿತ ಕುಟುಂಬಗಳಿಗೆ ಇಲಾಖೆ ವತಿಯಿಂದ ಆಹಾರ ಕಿಟ್ ಒದಗಿಸಲು ಆಶಾ ಕಾರ್ಯಕರ್ತೆ ಜಯಲಕ್ಷ್ಮಿ ಮನವಿ ಮಾಡಿದರು.

ಸಭೆಯಲ್ಲಿ ವೈದ್ಯಾಧಿಕಾರಿ ಡಾ. ಅಮಿತ್ ರಾಜ್, ತಾಪಂ ಸದಸ್ಯ ಸಚಿನ್ ಅಡಪ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News