ಲಾಕ್‌ಡೌನ್ ಉಲ್ಲಂಘನೆ: 265 ವಾಹನಗಳು ಮುಟ್ಟುಗೋಲು

Update: 2020-04-16 17:41 GMT

ಮಂಗಳೂರು, ಎ.16: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಲಾಕ್‌ಡೌನ್ ಉಲ್ಲಂಘನೆ ಮಾಡಿ ಸಂಚರಿಸುತ್ತಿದ್ದ 265 ವಾಹನಗಳನ್ನು ಮಂಗಳೂರು ನಗರ ಪೊಲೀಸರು ಗುರುವಾರ ಮುಟ್ಟುಗೋಲು ಹಾಕಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಿಗು ತಪಾಸಣೆ ನಡೆಸಲಾಗುತ್ತಿದ್ದು, ನಿಯಮ ಉಲ್ಲಂಘನೆ ಮಾಡಿದ 178 ದ್ವಿಚಕ್ರ ವಾಹನ, 12 ತ್ರಿಚಕ್ರ ವಾಹನ, 75 ನಾಲ್ಕು ಚಕ್ರಗಳ ವಾಹನ ಸಹಿತ ಒಟ್ಟು 256 ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News