ಎಸ್‌ಎಂಎ ತಲಪಾಡಿ ವಲಯದ ಮುಅಲ್ಲಿಮರಿಗೆ ಧನ ಸಹಾಯ
Update: 2020-04-16 23:26 IST
ತಲಪಾಡಿ, ಎ.16: ಎಸ್‌ಎಂಎ ತಲಪಾಡಿ ವಲಯದ ವತಿಯಿಂದ ಪ್ರತೀ ವರ್ಷ ರಮಝಾನ್‌ನ ರಜಾ ಅವಧಿಯಲ್ಲಿ ನೀಡುತ್ತಿದ್ದ ಧನ ಸಹಾಯವನ್ನು ಈ ಬಾರಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಗುರುವಾರ ನೀಡಲಾಯಿತು.
ವಲಯ ವ್ಯಾಪ್ತಿಯ ಕೆ.ಸಿ.ರೋಡ್, ಕೊಮರಂಗಳ, ಕೆ.ಸಿ. ನಗರ, ಹಿದಾಯತ್ ನಗರ, ಮಾಡೂರು, ಕಾಟುಂಗರ ಗುಡ, ತಲಪಾಡಿ, ಪೂಮಣ್ಣು, ಮಕ್ಯಾರ್, ಪಿಲಿಕೂರ್, ಪಂಜಲ, ರಹ್ಮಾನಿಯಾ ನಗರ, ಹೊಸ ನಗರ, ಬಟ್ಟಪ್ಪಾಡಿ, ಹಳೆಕೋಟೆ(ಉಳ್ಳಾಲ), ಮರ್ಕಝುಲ್ ಹಿದಾಯ,ಕೋಟೆಕಾರ್‌ನ 17 ಮದ್ರಸದಲ್ಲಿ ಕಾರ್ಯನಿರ್ವಹಿಸುತ್ತಿವ 57 ಮುಅಲ್ಲಿಮರಿಗೆ 1.13 ಲಕ್ಷ ರೂ.ವನ್ನು ವಿತರಿಸಲಾಯಿತು.
ಈ ಸಂದರ್ಭ ಹುಸೈನ್ ಸಅದಿ ಕೆಸಿ ರೋಡ್, ಎಸ್‌ಎಂಎ ಅಧ್ಯಕ್ಷ ಅಬ್ಬಾಸ್ ಹಾಜಿ ಕೋಮರಂಗಳ, ಕಾರ್ಯದರ್ಶಿ ಅಬ್ದುರ್ರಹ್ಮಾನ್ ಸಖಾಫಿ ಮಾಡೂರು, ಕೋಶಾಧಿಕಾರಿ ಹಾಜಿ ಎನ್‌ಎಸ್ ಉಮರ್ ಮಾಸ್ಟರ್, ಎಸ್‌ಎಂಎ ಉಳ್ಳಾಲ ವಲಯಾಧ್ಯಕ್ಷ ಬಾವಾ ಹಾಜಿ ಪಿಲಿಕೂರ್, ಮುಹಮ್ಮದ್ ಮದನಿ ಕೆ.ಸಿ.ರೋಡ್,ಎಸ್‌ಜೆಎಂ ಅಧ್ಯಕ್ಷ ಬಶೀರ್ ಅಹ್ಸನಿ ಉಪಸ್ಥಿತರಿದ್ದರು.