ಇಂದಿನಿಂದ ಎಸ್ಸೆಸ್ಸೆಫ್ ವತಿಯಿಂದ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು

Update: 2020-04-17 05:02 GMT

ಮಂಗಳೂರು, ಎ.17: ಎಸ್ಸೆಸ್ಸೆಫ್ ರಾಜ್ಯ ವಿಸ್ಡಂ ಹಾಗೂ ಕ್ಯಾಂಪಸ್  ವಿಭಾಗಗಳಿಂದ  ಕ್ಯಾಂಪಸ್ ವಿದ್ಯಾರ್ಥಿಗಳಿಗೆ  ಡ್ರಾಯಿಂಗ್, ಕ್ಯಾಲಿಗ್ರಫಿ, ಕ್ಯಾಪ್ಷನ್ ರೈಟಿಂಗ್, ಫ್ಯಾಮಿಲಿ ಮ್ಯಾಗಝಿನ್ ಮೊದಲಾದ ಸ್ಪರ್ಧೆಗಳು ಎಪ್ರಿಲ್ 17ರಿಂದ ಎ.25ರ ತನಕ ಹಮ್ಮಿಕೊಳ್ಳಲಾಗಿದೆ.

ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಎ.17, 18ರಂದು ಡ್ರಾಯಿಂಗ್ ಸ್ಪರ್ಧೆ, ಎ.19, 20ರಂದು ಪಿಯುಸಿ ಮತ್ತು ಡಿಗ್ರಿ ವಿದ್ಯಾರ್ಥಿಗಳಿಗೆ ಕ್ಯಾಲಿಗ್ರಫಿ ಸ್ಪರ್ಧೆ ಹಾಗೂ ಹೈಸ್ಕೂಲ್ ನಿಂದ ಡಿಗ್ರಿ ತನಕ ಕಲಿಯುವ ವಿದ್ಯಾರ್ಥಿಗಳಿಗೆ ಎ.19, 20, 21ರಂದು ಕ್ಯಾಪ್ಷನ್ ರೈಟಿಂಗ್ ಹಾಗೂ ಎ.21, 22 ಮತ್ತು 23ರಂದು ಫ್ಯಾಮಿಲಿ ಮ್ಯಾಗಝಿನ್ ಸ್ಫರ್ಧೆಗಳು ನಡೆಯಲಿದೆ.

ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9480074457, 9972567796 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News