ಎಸ್ಸೆಸ್ಸೆಫ್ ರಾಜ್ಯ ಮಟ್ಟದ ತನಾಫುಸ್-2020: ಅಲ್ ಖಾದಿಸ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

Update: 2020-04-17 12:55 GMT

ಬೆಳ್ತಂಗಡಿ, ಎ.16: ಲಾಕ್‌ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ದಅವಾ ಸಮಿತಿ ಆನ್ಲೈನ್ ಮೂಲಕ ರಾಜ್ಯದ ಮುತಅಲ್ಲಿಂ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ತನಾಫುಸ್-2020 ಇಂದು ಮುಕ್ತಾಯವಾಯಿತು.

ಡಿವಿಷನ್, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ನಾಲ್ಕು ಸ್ಪರ್ಧೆಗಳನ್ನು ನಡೆಸಿದ್ದು, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಕಾವಳಕಟ್ಟೆಯ ಅಲ್ ಖಾದಿಸ ವಿದ್ಯಾರ್ಥಿಗಳಾದ ಫಾರೂಕ್ ಬನ್ನೂರು ದಕ್ಷಿಣ ಕನ್ನಡ (ಕನ್ನಡ ಭಾಷಣ- ಪ್ರಥಮ), ಹಾಸನ ಜಿಲ್ಲೆಯ ಅಯಾನ್ ಅರಸೀಕೆರೆ(ಉರ್ದು ಭಾಷಣ ಸ್ಪರ್ಧೆ- ಪ್ರಥಮ), ದಾವಣಗೆರೆ ಜಿಲ್ಲೆಯ ಅಬ್ದುಲ್ ಲತೀಫ್ ಜಗಳೂರು (ಉರ್ದು ಭಾಷಣ- ದ್ವಿತೀಯ) ಸ್ಥಾನ ಪಡೆದುಕೊಂಡಿದ್ದಾರೆ.

"ಈ ಮೂವರು ವಿದ್ಯಾರ್ಥಿಗಳು ಕಾವಳಕಟ್ಟೆಯ ಅಲ್ ಖಾದಿಸ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ ವಿದ್ಯಾರ್ಥಿಗಳಾಗಿದ್ದು ಸಂಸ್ಥೆಗೆ ಅಭಿಮಾನವಾಗಿದೆ. ಈ ಐತಿಹಾಸಿಕ ಸಾಧನೆಯೊಂದಿಗೆ ಸಂಸ್ಥೆಗೆ ಹೆಮ್ಮೆ ತಂದ ವಿದ್ಯಾರ್ಥಿಗಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ" ಎಂದು ಅಲ್ ಖಾದಿಸ ಅಧ್ಯಾಪಕ ವೃಂದ ಹಾರೈಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News