‘ಹಿರಿಯ ನಾಗರಿಕರ ಮನೆ ಬಾಗಿಲಿಗೆ ಅಗತ್ಯ ಸಾಮಗ್ರಿ ಪೂರೈಕೆ’
ಉಡುಪಿ, ಎ.17: ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144(3) ರಂತೆ ನಾಗರಿಕರ ಸಂಚಾರವನ್ನು ನಿಬರ್ಂಧಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ತೊಂದರೆ ಅನುಭವಿಸುವ ಹಿರಿಯ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಜಿಲ್ಲೆಯ ನಗರ ಪ್ರದೇಶಗಳಾದ ಉಡುಪಿ ನಗರಸಭೆ, ಕುಂದಾಪುರ, ಕಾಪು ಹಾಗೂ ಕಾರ್ಕಳ ಪುರಸಭೆಗಳು ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಿರುವ ನಾಗರಿಕರ ಪೈಕಿ 60 ಷರ್ ಮೇಲ್ಪಟ್ಟ ಹಿರಿಯ ನಾಗರಿಕರ ಕುಟುಂಬಗಳಿಗೆ (60 ವರ್ಷಕ್ಕಿಂತ ಕೆಳಗಿನ ಸಂಬಂಧಿಕರು ಯಾರೂ ಅವರೊಂದಿಗೆ ವಾಸ್ತವ್ಯವಿರದಿದ್ದಲ್ಲಿ ) ಅಗತ್ಯ ವಸ್ತುಗಳ ಮತ್ತು ಔಷದಿಗಳನ್ನ ಅವರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದವರು ಹೇಳಿದ್ದಾರೆ.
ಇದಕ್ಕಾಗಿ ಇಂಥ ಹಿರಿಯರು ಒಂದು ವಾರದ ಮಟ್ಟಿಗೆ ತಮಗೆ ಅವಶ್ಯಕತೆ ಇರುವ ತರಕಾರಿ, ದಿನಸಿ, ಹಣ್ಣುಹಂಪಲು, ಔಷಧಿ ಮುಂತಾದ ಅಗತ್ಯ ವಸ್ತುಗಳ ಪಟ್ಟಿ ಮಾಡಿ ಮನೆಯ ಸಂರ್ಪೂಣ ವಿಳಾಸದೊಂದಿಗೆ ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಅಗತ್ಯ ಸಾಮಾಗ್ರಿಗಳ ಪಟ್ಟಿಯನ್ನು ಹಾಗೂ ಮನೆಯ ವಿಳಾಸ ಹಾಗೂ ಸ್ಥಳವನ್ನು ವಾಟ್ಸಪ್ ಮೂಲಕ ಕಳುಹಿಸಬಹುದಾಗಿದೆ. ವಸ್ತುಗಳು ಮನೆಗೆ ತಲುಪಿಸಿದಾಗ ಅದಕ್ಕೆ ತಗಲುವ ವೌಲ್ಯವನ್ನು ಪಾವತಿಸಬೇಕು. ನಗರ ಪ್ರದೇಶಗಳಲ್ಲಿ ವಾಸವಿರುವ ಎಲ್ಲಾ 60 ವಷರ್ ಮೇಲ್ಪಟ್ಟ ಹಿರಿಯನಾಗರಿಕರಿಗೆ ಜಿಲ್ಲಾಡಳಿತ ವತಿುಂದ ವ್ಯವಸ್ಥೆಯನ್ನು ಮಾಡಲಾಗಿದೆ.
ಹಿರಿಯ ನಾಗರಿಕರ ಮೇಲಿನ ಕಾಳಜಿಯಿಂದ ಜಿಲ್ಲಾಡಳಿತ ಮಾಡಿರುವ ಈ ವ್ಯವಸ್ಥೆಯನ್ನು ಕಡಿಮೆ ಸಂಖ್ಯೆಯ ಹಿರಿಯರು ಪಡೆಯುತ್ತಿರುವುದು ಕಂಡು ಬಂದಿದೆ. 60ವರ್ಷ ಮೇಲ್ಪಟ್ಟ ವಯೋಮಾನ ನಾಗರಿಕರು ತಮ್ಮ ದೈನಂದಿನ ಉಪಯೋಗದ ಅಗತ್ಯ ವಸ್ತುಗಳನ್ನು ಮಾರುಕಟ್ಟೆಗೆ ಬಂದು ಕೊಂಡುಕೊಳ್ಳಲು ಕಷ್ಟವಾಗಿರುವ ಕಾರಣಕ್ಕಾಗಿ ಮಾಡಿರುವ ಒಳ್ಳೆಯ ವ್ಯವಸ್ಥೆಯ ಸದುಪಯೋಗ ವನ್ನು ಎಲ್ಲರೂ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಂಪರ್ಕ ವಿಳಾಸ: ಉಡುಪಿ ನಗರಸಭೆ ವ್ಯಾಪ್ತಿಯ ನಿವಾಸಿಗಳು ಸಂಪರ್ಕಸಬೇಕಾದ ಅಧಿಕಾರಿಗಳ ವಿವರ: ಆನಂದ ಸಿ.ಕಲ್ಲೋಳಿಕರ, ಪೌರಾಯುಕ್ತರು ನಗರಸಭೆ ಉಡುಪಿ (9740019211), ಮೋಹನರಾಜುಸಹಾಯಕ ಕಾರ್ಯನಿವಾಹಕ ಇಂಜಿನಿಯರ್(9342594242), ಸ್ನೇಹಾಪರಿಸರ ಇಂಜಿನಿಯರ್(9164397765), ಧನಂಜಯ, ಕಂದಾಯ ಅಧಿಕಾರಿ (8762083841).
ಕುಂದಾಫುರ ಪುರಸಭಾ ವ್ಯಾಪ್ತಿಯ ನಿವಾಸಿಗಳಿಗೆ: ರಾಘವೇಂದ್ರ, ಪರಿಸರ ಇಂಜಿನಿಯರ್ (9448507244), ಕಾರ್ಕಳ ಪುರಸಭೆ ವ್ಯಾಪ್ತಿಯ ನಿವಾಸಿಗಳು: ರೇಖಾ ಶೆಟ್ಟಿ, ಮುಖ್ಯಾಧಿಕಾರಿ ಪುರಸಭೆ ಕಾರ್ಕಳ (9900948873), ಕಾಪು ಪುರಸಭೆ ವ್ಯಾಪ್ತಿ ನಿವಾಸಿಗಳು: ರವಿಪ್ರಕಾಶ್, ಪರಿಸರ ಇಂಜಿನಿಯರ್ ಕಾಪು (7624851225), ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿ ನಿವಾಸಿಗಳು: ಅರುಣ್, ಮುಖ್ಯಾಧಿಕಾರಿ ಪ.ಪಂಚಾಯತ್ ಸಾಲಿಗ್ರಾಮ (9449943882) ಮಮತ, ಆರೋಗ್ಯ ನಿರೀಕ್ಷಕರು (9035627273)