ಲಾಕ್‌ಡೌನ್ ಉಲ್ಲಂಘನೆ: 129 ವಾಹನಗಳು ಮುಟ್ಟುಗೋಲು
Update: 2020-04-17 21:44 IST
ಮಂಗಳೂರು, ಎ.17: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಲಾಕ್‌ಡೌನ್ ಉಲ್ಲಂಘನೆ ಮಾಡಿ ಸಂಚರಿಸುತ್ತಿದ್ದ 129 ವಾಹನಗಳನ್ನು ಮಂಗಳೂರು ನಗರ ಪೊಲೀಸರು ಶುಕ್ರವಾರ ಮುಟ್ಟುಗೋಲು ಹಾಕಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಿಗು ತಪಾಸಣೆ ನಡೆಸಲಾಗುತ್ತಿದ್ದು, ನಿಯಮ ಉಲ್ಲಂಘನೆ ಮಾಡಿದ 105 ದ್ವಿಚಕ್ರ ವಾಹನ, 9 ತ್ರಿಚಕ್ರ ವಾಹನ, 15 ನಾಲ್ಕು ಚಕ್ರಗಳ ವಾಹನ ಸಹಿತ ಒಟ್ಟು 129 ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಲಾಗಿದೆ.