×
Ad

ಮೂಳೂರು ಮಸೀದಿಯಿಂದ ಸಾಂತ್ವನ ಕಿಟ್

Update: 2020-04-17 21:54 IST

ಕಾಪು : ಮೂಳೂರು ಜುಮಾ ಮಸೀದಿಯ ಅಧೀನದಲ್ಲಿ ದಿನಸಿ ಸಾಮಗ್ರಿಗಳ ಅವಶ್ಯಕತೆಯುಳ್ಳ ಎಲ್ಲಾ ಜಮಾತ್‍ದಾರರಿಗೆ ಸಾಂತ್ವನ ಕಿಟ್ಟನ್ನು ವಿತರಿಸಲಾಯಿತು.

ಈಗಾಗಲೇ ಸುಮಾರು 345 ರಷ್ಟು ಕಿಟ್ ವಿತರಿಸಿದ್ದು, ಇನ್ನು 270 ರಷ್ಟು ಕಿಟ್ ವಿತರಣೆಗೆ ತಯಾರಿ ನಡೆಯುತ್ತಿದೆ. ಇದರ ಎಲ್ಲಾ ಜವಾಬ್ದಾರಿ ಯನ್ನು ಜಮಾಅತ್ ಅಧೀನದ ಸಾಂತ್ವನ ತಂಡ ವಹಿಸಿದೆ. ಊರಿನ ಜನರಿಗಾಗಿ ಹಗಲಿರುಳೆನ್ನದೆ ದುಡಿಯುತ್ತಿರುವ ಮೂಳೂರಿನ ಆಶಾ ಕಾರ್ಯಕರ್ತೆಯರಿಗೆ ಶ್ರೀ ವಾಸು ಬಂಗೇರರ ಉಪಸ್ಥಿತಿಯಲ್ಲಿ ದಿನಬಳಕೆಯ ಆಹಾರ ಸಾಮಗ್ರಿಗಳನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭ ಸಾಂತ್ವನ ತಂಡದ ಸದಸ್ಯರಾದ ಕೌನ್ಸಿಲರ್ ಅಬ್ದುಲ್ ಹಮೀದ್ ಅದ್ದು, ವೈ ಬಿ ಸಿ ಅಹ್ಮದ್ ಬಾವ ಹಾಗೂ ಅಬ್ದುಲ್ ಹಮೀದ್ ಯೂಸುಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News