ಎಸ್ ಬಿಐ ಬಿ.ಸಿ.ರೋಡ್ ಶಾಖೆಯಿಂದ ವಲಸೆ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ
Update: 2020-04-17 22:07 IST
ಬಂಟ್ವಾಳ, ಎ.17: ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಕಾರ್ಮಿಕ ಕುಟುಂಬಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿ.ಸಿ.ರೋಡು ಶಾಖೆಯ ವತಿಯಿಂದ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.
ತಾಲೂಕಿನ ಬಿ.ಸಿ.ರೋಡ್, ತುಂಬೆ, ಕಳ್ಳಿಗೆ ಪ್ರದೇಶದಲ್ಲಿರುವ 40 ವಲಸೆ ಕಾರ್ಮಿಕರ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಎಂ ವಿ.ಕೆ.ಸುಕುಮಾರ್, ರೀಜನಲ್ ಮೇನೆಜರ್ ದಿನೇಶ್ ಅರೂರ, ಶಾಖಾ ಮುಖ್ಯ ವ್ಯವಸ್ಥಾಪಕ ಟಿ.ವಿ.ರವೀಂದ್ರ ಕುಮಾರ್, ಸಾಮಾಜಿಕ ಕಾರ್ಯಕರ್ತ ಆಶಿಕ್ ಕುಕ್ಕಾಜೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಲಿನಿ, ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನ, ಉಪಾಧ್ಯಕ್ಷ ಪುರುಷ ಸಾಲಿಯಾನ್, ಸದಸ್ಯ ಮಧುಸೂದನ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಸಿಬ್ಬಂದಿ ಉಪಸ್ಥಿತರಿದ್ದರು.