×
Ad

ಕೊರೋನ ಮಾದರಿ ಸಂಗ್ರಹಿಸುವ ಕಿಯೋಸ್ಕ್ ಹಸ್ತಾಂತರ

Update: 2020-04-17 22:08 IST

ಉಡುಪಿ, ಎ.17: ಭಾರತೀಯ ವೈದ್ಯಕೀಯ ಸಂಘ ಉಡುಪಿ -ಕರಾವಳಿ ಶಾಖೆಯ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಉಚಿತವಾಗಿ ನೀಡಲಾದ ಕೊರೋನಾ ಸೋಂಕು ಮಾದರಿ ಸಂಗ್ರಹ ಮಾಡುವ ಕಿಯೋಸ್ಕ್‌ನ್ನು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಶುಕ್ರವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಯ ವೈದ್ಯರ ತಂಡ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಜಿಲ್ಲೆಗೆ ಮತ್ತಷ್ಟು ಪಿಪಿಟಿ ಕಿಟ್‌ಗಳ ಆವಶ್ಯಕತೆಯಿದೆ. ಇದಕ್ಕೆ ಬೇಕಿರುವಂತಹ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕಿಯೋಸ್ಕ್‌ನ್ನು ದಾನಿಗಳು ನೀಡಿದರೆ ತಾಲೂಕು ಕೇಂದ್ರ ಗಳಲ್ಲಿಯೂ ಸ್ಥಾಪಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಮಾದರಿ ದ್ರವ ಸಂಗ್ರಹಣೆಯ ಪ್ರಾತ್ಯಕ್ಷಿಕೆ ನಡೆಸ ಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಉಮೇಶ ಪ್ರಭು, ಕಾರ್ಯದರ್ಶಿ ಡಾ.ಪ್ರಕಾಶ ಭಟ್, ಜಿಲ್ಲಾ ಸರ್ಜನ್ ಡಾ ಮಧುಸೂಧನ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News