​ಅಮೆಮ್ಮಾರ್ ಮಸೀದಿ ಆಡಳಿತ ಸಮಿತಿ ವತಿಯಿಂದ ರೇಷನ್ ಕಿಟ್ ವಿತರಣೆ

Update: 2020-04-17 17:16 GMT

ಫರಂಗಿಪೇಟೆ : ಲಾಕ್ ಡೌನ್ ಕಾರಣದಿಂದ ಅಮೆಮ್ಮಾರ್ ನ ಸುಮಾರು 400 ಕುಟುಂಬಗಳಿಗೆ ಬದ್ರಿಯಾ ಜುಮಾ ಮಸೀದಿ  ಅಮೆಮ್ಮಾರ್ ಇದರ ಆಡಳಿತ ಸಮಿತಿ ಮತ್ತು ಸಂಘ ಸಂಸ್ಥೆಗಳು ಹಾಗೂ  ಜಮಾತಿಗೊಳಪ್ಪಟ್ಟ ಕೆಲವು ದಾನಿಗಳ ನೆರವಿನೊಂದಿಗೆ  7 ಲಕ್ಷ ರೂ. ವೆಚ್ಚದಲ್ಲಿ 400 ಮನೆಗಳಿಗೆ ರೇಷನ್ ಕಿಟ್ ಮಂಗಳವಾರ ವಿತರಿಸಲಾಯಿತು.

ಈ ಸಂದರ್ಭ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಉಮರಬ್ಬ , ಉಪಾಧ್ಯಕ್ಷ ಎಫ್ಎ ಕಾದರ್, ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಕಾರ್ಯದರ್ಶಿ ಮೊಹಮ್ಮದ್ ಶಾಫಿ, ಮಕ್ಬೂಲು, ಕೋಶಾಧಿಕಾರಿ ಮುಸ್ತಫಾ, ಲೆಕ್ಕ ಪರಿಶೋಧಕ ಅಕ್ತರ್ ಹುಸೈನ್, ಸದಸ್ಯರಾದ ಹಮೀದ್,  ಸುಲೈಮಾನ್ ಉಸ್ತಾದ್, ಅಬ್ದುಲ್ ರಝಾಕ್, ಅನಸ್, ಜಮಾಲ್, ಇಬ್ರಾಹಿಂ, ಖಾದರ್, ಬಶೀರ್ ತಂಡೇಲ್, ಇಕ್ಬಾಲ್ ಜಿ, ಬದ್ರುದ್ದೀನ್, ಹೈದರ್, ದಾವುದು ಸಿಎಚ್,  ಶರೀಫ್, ಉಸ್ಮಾನ್ ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News