×
Ad

ಕೊರೋನ ವೈರಸ್ ಭೀತಿ : ಮಂಗಳೂರು ಜೈಲಿನಿಂದ ಖೈದಿಗಳ ತಾತ್ಕಾಲಿಕ ‌ಸ್ಥಳಾಂತರ

Update: 2020-04-18 12:45 IST
ಫೈಲ್ ಚಿತ್ರ

ಮಂಗಳೂರು: ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮಂಗಳೂರು ಜೈಲಿನಿಂದ ಖೈದಿಗಳ ತಾತ್ಕಾಲಿಕ ಸ್ಥಳಾಂತರಿಸಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. 

ಸುರಕ್ಷಿತ‌ ಅಂತರ ಕಾಯ್ದುಕೊಳ್ಳುವ ಸಲುವಾಗಿ ಸುಮಾರು ‌80 ಖೈದಿಗಳನ್ನು ಸ್ಥಳಾಂತರ ಮಾಡಲಾಗಿದೆ. ಸದ್ಯ ಮಂಗಳೂರಿನಲ್ಲಿ  6 ಮಹಿಳೆಯರ ಸಹಿತ 311 ಮಂದಿ‌ ಇದ್ದಾರೆ. ಆದರೆ ಇಲ್ಲಿನ‌ ಸಾಮರ್ಥ್ಯ 210 ಖೈದಿಗಳಿಗೆ ಮಾತ್ರ.‌ ಹಾಗಾಗಿ 80 ಖೈದಿಗಳನ್ನು ರಾಜ್ಯದ ಬೇರೆ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News