ಉಡುಪಿ: ಪಡಿತರ ಪಡೆಯಲು ಸೂಚನೆ
Update: 2020-04-18 18:29 IST
ಉಡುಪಿ, ಎ.18:ಜಿಲ್ಲೆಯಲ್ಲಿ ಈಗಾಗಲೇ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ವಿಲೇವಾರಿಗೆ ಬಾರಿ ಇರುವ ಅರ್ಜಿದಾರರಿಗೆ ಅವರ ಅರ್ಜಿಗಳಿಗೆ ಪಡಿತರ ಹಂಚಿಕೆಯಾಗಿದೆ. ಅಂತಹ ಅರ್ಜಿದಾರರು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನು ಪಡೆಯಬಹುದಾಗಿದೆ.
ಬಿಪಿಎಲ್ ಪಡಿತರ ಚೀಟಿ ಅರ್ಜಿದಾರರಿಗೆ ಪ್ರತಿ ಅರ್ಜಿಗೆ 10ಕೆ.ಜಿಯಂತೆ ಅಕ್ಕಿಯನ್ನು ಉಚಿತವಾಗಿ ಹಾಗೂ ಎಪಿಎಲ್ ಪಡಿತರ ಚೀಟಿ ಅರ್ಜಿದಾರ ರಿಗೆ ಪ್ರತಿ ಕೆ.ಜಿ.ಗೆ 15ರೂ. ದರದಲ್ಲಿ 10ಕೆ.ಜಿ.ಅಕ್ಕಿಯನ್ನು ನೀಡಲಾಗುವುದು. ಅರ್ಜಿದಾರರು ತಾವು ಅರ್ಜಿ ಸಲ್ಲಿಸಿದ ಬಗ್ಗೆ ತಮ್ಮಲ್ಲಿ ಇರುವ ಅರ್ಜಿಯ ಪ್ರತಿ ಯನ್ನು ಹಾಗೂ ಆಧಾರ್ ಕಾರ್ಡನ್ನು ನ್ಯಾಯಬೆಲೆ ಅಂಗಡಿಗೆ ಹಾಜರುಪಡಿಸಿ ಅಕ್ಕಿಯನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.