ಉಡುಪಿ ನಗರಸಭೆ: ಆಸ್ತಿ ತೆರಿಗೆ ಪಾವತಿಗೆ ಸೂಚನೆ
ಉಡುಪಿ, ಎ.18: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ 2002ರ ಮಾರ್ಚ್ ನಿಂದ ಸ್ವಯಂ ಘೋತ ಆಸ್ತಿ ತೆರಿಗೆ ಪದ್ದತಿ ಜಾರಿಯಲಿದೆ. ಕರ್ನಾಟಕ ಪುರಸಭಾ ಕಾಯ್ದೆ 1964ರ ನಿಯಮ 102ಎರಂತೆ, ಕರ್ನಾಟಕ ಸ್ಟಾಂಪ್ ಕಾಯ್ದೆ 1957ರ ಸೆಕ್ಷನ್ 45ಬಿ ಅನ್ವಯ, ಮಾರುಕಟ್ಟೆ ಮೌಲ್ಯದ ಶೇ.50ರ ಮೇಲೆ ಜಾಗ ಮತ್ತು ಕಟ್ಟಡ ವೌಲ್ಯದ ಮೇಲೆ ವಾಸ್ತವ್ಯ/ವಾಣಿಜ್ಯ ಉದ್ದೇಶಕ್ಕನುಗುಣವಾಗಿ ಲೆಕ್ಕಾಚಾರ ಮಾಡಿ, ಕಟ್ಟಡ ನಿರ್ಮಿಸಿದ ವರ್ಷದ ಆಧಾರದಲ್ಲಿ ಸವಕಳಿ ಕಳೆದು, 205-06ನೇ ಸಾಲಿನಿಂದ ಪ್ರತೀ 3 ವರ್ಷದ ಬ್ಲಾಕ್ ಅವಧಿ ವರ್ಷಗಳಿಗೊಮ್ಮೆ ಶೇ.15ರ ತೆರಿಗೆ ಹೆಚ್ಚಳ ಮಾಡಿ ವಸೂಲಿ ಮಾಡಲಾಗುತ್ತಿದೆ.
2020-21ನೇ ಸಾಲಿನ ತೆರಿಗೆಯ ಮೇಲೆ ಮುಂದಿನ 3 ವರ್ಷಗಳ ಅವಧಿಗೆ ಶೇ.15 ಹೆಚ್ಚಳವಾಗಿರುತ್ತದೆ.ಆದುದರಿಂದ ತೆರಿಗೆ ಪಾವತಿದಾರರು 2020-21ನೇ ಸಾಲಿಗೆ ಶೇ.15 ಹೆಚ್ಚಳದೊಂದಿಗೆ ತೆರಿಗೆ ಪಾವತಿಸಬೇಕಿದೆ. 2020-21ನೆ ಸಾಲಿನ ತೆರಿಗೆಯನ್ನು ಮುಂದಿನ ಮೇ 31ರವರೆಗೆ ಶೇ.5 ರಿಯಾಯತಿಯೊಂದಿಗೆ ಪಾವತಿಸಲು ಅವಕಾಶವಿದ್ದು, ಸಾರ್ವಜನಿಕರು ಈ ತೆರಿಗೆ ರಿಯಾಯತಿಯ ಸದುಪಯೋಗ ಪಡೆದು ನಗರಸಭೆ ಯೊಂದಿಗೆ ಸಹಕರಿಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.