ಎ.21: ವಿವಿಧೆಡೆ ವಿದ್ಯುತ್ ನಿಲುಗಡೆ
ಮಂಗಳೂರು/ಉಡುಪಿ, ಎ.18: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿಯು ಎ.21ರಂದು ಬೆಳಗ್ಗೆ 10ರಿಂದ ಸಂಜೆ 5:30ರವರೆಗೆ 110/11 ಕೆ ಗುರುಪುರ ಉಪಕೇಂದ್ರದಿಂದ ಹೊರಡುವ 11 ಕೆ ಗುರುಪುರ ಮತ್ತು ಸಾದೂರು ಫೀಡರುಗಳಲ್ಲಿ ನಿರ್ವಹಣಾ ಕಾಮಗಾರಿಗಳನ್ನು (ಜಿಒಎಸ್ ರಿಪೇರಿ, ಜಂಗಲ್ ಕಟ್ಟಿಂಗ್) ಹಮ್ಮಿಕೊಂಡಿರುವುದರಿಂದ ಗುರುಪುರ, ಬಂಗ್ಲೆಗುಡ್ಡೆ, ಕೊಟ್ಟಾರಿ ಗುಡ್ಡೆ, ಬೆಳ್ಳೂರು, ಮಳಲಿ, ಭವಂತಿಬೆಟ್ಟು, ನಾಡಾಜೆ, ಅಡ್ಡೂರು, ನರ್ಲ, ಜೋಡುತದಮೆ, ತಾರಿಕರಿಯ, ಮೊಗರು, ಮಳಳಿಪೇಟೆ, ಕಾಜಿಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಎ.21ರಂದು ಬೆಳಗ್ಗೆ 9:30ರಿಂದ 5ರವರೆಗೆ ನಿಟ್ಟೂರು 110/33/11 ಕೆ ಉಪಕೇಂದ್ರದಿಂದ ಹೊರಡುವ 11ಕೆ ಅಂಬಲಪಾಡಿ ಮತ್ತು ಕುಡ್ಸೆಂಪು ಫೀಡರ್‌ನಲ್ಲಿ ತುರ್ತು ನಿರ್ವಹಣೆ ಮತ್ತು ರಸ್ತೆ ಅಗಲೀಕರಣ ಕಾಮಗಾರಿ ನಿಮಿತ್ತ ಉಡುಪಿ ನಗರದ ಅಂಬಲಪಾಡಿ, ಕಿನ್ನಿಮುಲ್ಕಿ, ಕನ್ನರ್ಪಾಡಿ, ನಾಯರ್‌ಕೆರೆ, ಅಜ್ಜರಕಾಡು, ಕಡೆಕಾರ್, ಕಿದಿಯೂರು, ಪಡುಕೆರೆ, ಕರಾವಳಿ ಬೈಪಾಸ್, ಆದಿ ಉಡುಪಿ, ಪಂದುಬೆಟ್ಟು, ಕಲ್ಮಾಡಿ, ಮಲ್ಪೆಪೇಟೆ, ಮಲ್ಪೆಬಂದರು, ಎಪಿಎಂಸಿ ಯಾರ್ಡ್, ಬಂಕೇರಕಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಲಿದೆ.
ಎ.21ರಂದು ಬೆಳಗ್ಗೆ 9:30ರಿಂದ ಸಂಜೆ 5:30ರವರಗೆ 110/11ಕೆ ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಿಂದ ಹೊರಡುವ ಹೇರೂರು ಮತ್ತು ಉಪ್ಪೂರು ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೈರಾಬೆಟ್ಟು, ಅಮ್ಮುಂಜೆ, ಜಾತಬೆಟ್ಟು, ತೆಂಕಬೆಟ್ಟು, ಸಾಲ್ಮರ, ಕೆ.ಜಿ.ರೋಡ್, ಭದ್ರಗಿರಿ, ಕಲ್ಯಾಣಪುರ, ಕೋಟೆ ರೋಡ್, ನೇಜಾರು, ಬಿಸಿ ರೋಡ್, ಭದ್ರಗಿರಿ, ಪಡುಬೈಕಾಡಿ, ಕೃಷ್ಣಮಿಲ್ಕ್, ಸುಪ್ರೀಂ ಫೀಡ್ಸ್, ದೇವಸ್ಥಾನಬೆಟ್ಟು, ರುಡ್‌ಸೆಟ್, ಬೈಕಾಡಿ, ಹೇರೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.