15 ಹೊಸ ಕೊರೋನ ಪ್ರಕರಣಗಳು ಪತ್ತೆ: ನೂರರ ಗಡಿ ದಾಟಿದ ಧಾರಾವಿ

Update: 2020-04-18 15:33 GMT

ಮುಂಬೈ,ಎ.18: ಮುಂಬೈನ ಕೊಳೆಗೇರಿ ಧಾರಾವಿಯಲ್ಲಿ ಶುಕ್ರವಾರ 15 ಜನರಲ್ಲಿ ಹೊಸದಾಗಿ ಕೊರೋನ ವೈರಸ್ ಸೋಂಕು ಕಾಣಿಸಿಕೊಂಡಿದ್ದು,ಈ ಪ್ರದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 101ಕ್ಕೇರಿದೆ. ಇಲ್ಲಿ ಈವರೆಗೆ ಕನಿಷ್ಠ 10 ಜನರು ಸೋಂಕಿಗೆ ಬಲಿಯಾಗಿದ್ದಾರೆ.

62ರ ಪ್ರಾಯದ ಕೋವಿಡ್-19 ರೋಗಿಯೋರ್ವ ಶುಕ್ರವಾರ ನಗರದ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಬೃಹನ್ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಯೋರ್ವರು ತಿಳಿಸಿದರು.

ಧಾರಾವಿಯ ಇಕ್ಕಟ್ಟಾದ ಓಣಿಗಳಲ್ಲಿನ ರೆಪಡಪಟ್ಟಿಗಳಲ್ಲಿ ಸುಮಾರು ಎಂಟು ಲಕ್ಷ ಜನರು ವಾಸವಾಗಿದ್ದು,ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಕಷ್ಟವಾಗಿದೆ. ಜನನಿಬಿಡತೆ ಮತ್ತು ಕೊಳಕು ಪರಿಸರದಿಂದಾಗಿ ಈ ಪ್ರದೇಶದಲ್ಲಿ ಕೊರೋನ ವೈರಸ್ ತ್ವರಿತವಾಗಿ ಹಬ್ಬಬಹುದು ಎಂದು ಅಧಿಕಾರಿಗಳು ಕಳವಳಗೊಂಡಿದ್ದಾರೆ. ಶನಿವಾರ ಬೆಳಿಗ್ಗೆಯವರೆಗೆ ಮಹಾರಾಷ್ಟ್ರದಲ್ಲಿ 3,323 ಪ್ರಕರಣಗಳಿದ್ದು,201 ಜನರು ಮೃತಪಟ್ಟಿದ್ದಾರೆ. ಈ ಪೈಕಿ 2,110 ಪ್ರಕರಣಗಳು ಮುಂಬೈ ಮಹಾನಗರವೊಂದರಲ್ಲಿಯೇ ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News