×
Ad

ಅಖಿಲ ಭಾರತ ತುಳು ಒಕ್ಕೂಟ: ಮೇ 3, 9ರ ಕಾರ್ಯಕ್ರಮ ಮುಂದೂಡಿಕೆ

Update: 2020-04-18 21:42 IST

ಮಂಗಳೂರು : ಕಾವೂರಿನ ಅಖಿಲ ಭಾರತ ತುಳು ಒಕ್ಕೂಟ ಗಾಂಧಿನಗರ ಮಂಗಳೂರು ಇಲ್ಲಿ ಮೇ 3 ಮತ್ತು 9 ರಂದು ನಡೆಯಬೇಕಿದ್ದ ಮಹಾಸಭೆ, ತೆಂಕುತಿಟ್ಟು ಯಕ್ಷನಾಟ್ಯ ತರಬೇತಿ ಮಕ್ಕಳ ರಂಗ ಪ್ರವೇಶ, ಯಕ್ಷಗಾನದ ಪ್ರದರ್ಶನ ಮತ್ತು ಸಭಾ ಕಾರ್ಯಕ್ರಮ, ಸಾಧಕರಿಗೆ ಗೌರವ ಕಾರ್ಯಕ್ರಮಗಳನ್ನು ಕೊರೋನ ಲಾಕ್‌ಡೌನ್ ನಿಮಿತ್ತ ಮುಂದೂಡಲಾಗಿದೆ.

ಮುಂದಿನ ಸಭೆಯಲ್ಲಿ ದಿನಾಂಕ ನಿಗದಿ ಪಡಿಸಿ ಒಕ್ಕೂಟದ ಘಟಕಗಳಿಗೆ ತಿಳಿಸಲಾಗುವುದು ಎಂದು ದೇಶದಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ತುಳು ಸಂಘ ಘಟಕಗಳಿಗೆ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News