×
Ad

ಜಾಮಿಯಾ ಮಿಲ್ಲಿಯಾ ಪ್ರಕರಣ: ಶರ್ಜೀಲ್ ಇಮಾಮ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

Update: 2020-04-18 21:56 IST

ಹೊಸದಿಲ್ಲಿ, ಎ.18: ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ದಂಗೆಗೆ ದುಷ್ಪ್ರೇರಣೆ ನೀಡಿದ ಮತ್ತು ದೇಶದ್ರೋಹದ ಭಾಷಣ ಮಾಡಿದ ಆರೋಪದಲ್ಲಿ ಶರ್ಜೀಲ್ ಇಮಾಮ್ ವಿರುದ್ಧ ದಿಲ್ಲಿ ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡಿಸೆಂಬರ್ 13ರಂದು ಮಾಡಿದ್ದ ಭಾಷಣದ ಮೂಲಕ ದಂಗೆಗೆ ದುಷ್ಪ್ರೇರಣೆ ಮತ್ತು ಪ್ರಚೋದನೆ ನೀಡಿದ ಆರೋಪದಲ್ಲಿ ಇಮಾಮ್‌ನನ್ನು ಜನವರಿ 28ರಂದು ಬಿಹಾರದ ಜೆಹಾನಾಬಾದ್‌ನಲ್ಲಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ದಂಗೆಕೋರರ ವಿರುದ್ಧ ಈ ಹಿಂದೆಯೇ ಪ್ರಥಮ ಚಾರ್ಜ್‌ಶೀಟ್ ದಾಖಲಿಸಲಾಗಿದ್ದು ಈಗ ದಿಲ್ಲಿಯ ಸಾಕೇತ್ ಕೋರ್ಟ್‌ನಲ್ಲಿ ಪೂರಕ ಆರೋಪಪಟ್ಟಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News