×
Ad

ಎ.20ರಿಂದ ‘ಬೀಡಿ ಕೆಲಸ’ಕ್ಕೆ ಒಪ್ಪಿಗೆ

Update: 2020-04-18 22:12 IST

ಮಂಗಳೂರು, ಎ.18: ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೀಡಿ ಸುರುಟಲಾಗದೆ ಅತಂತ್ರ ಸ್ಥಿತಿಯಲ್ಲಿರುವ ಬೀಡಿ ಕಾರ್ಮಿಕರಿಗೆ ಎ.20ರಿಂದ ಕೆಲಸ ನೀಡಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ ಎಂದು ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್‌ ಯೂನಿಯನ್ (ಎಚ್‌ಎಂಎಸ್)ನ ಅಧ್ಯಕ್ಷ ಮುಹಮ್ಮದ್ ರಫಿ ತಿಳಿಸಿದ್ದಾರೆ.

 ಶನಿವಾರ ಡಿಸಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಕಾರ್ಮಿಕ ಆಯುಕ್ತ ನಾಗರಾಜ್ ಮತ್ತು ಕಾರ್ಮಿಕ ಸಂಘಟನೆಯ ಮುಖಂಡರಾದ ಸುರೇಶ್ಚಂದ್ರ ಶೆಟ್ಟಿ, ಬಿಎಂ ಭಟ್, ಬಾಲಕೃಷ್ಣ ಶೆಟ್ಟಿ, ಸತೀಶ್ ಪೈ, ಯೋಗೀಶ್ ಶೆಣೈ, ಗುಜರಾತ್ ಬೀಡಿ ಕಂಪನಿಯ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.

ಎ.20ರಿಂದ ಬೀಡಿ ಕೆಲಸ ನೀಡಲು ಮತ್ತು ಮೇ 5ರೊಳಗೆ ಬೋನಸ್ ನೀಡಲು ಸಭೆ ತೀರ್ಮಾನಿಸಿದೆ. ಕಾರ್ಮಿಕರು ಬೆಳಗ್ಗೆ 7ರಿಂದ ಮಧ್ಯಾಹ್ನ 12ರೊಳಗೆ ಬೀಡಿ ಬ್ರಾಂಚಿಗೆ ತೆರಳಿ ‘ಸುರಕ್ಷಿತ ಅಂತರ’ ಕಾಪಾಡಿಕೊಂಡು ಬೀಡಿಗಳನ್ನು ನೀಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News