×
Ad

ಯುನಿವೆಫ್ ಕರ್ನಾಟಕದ ‘ಅಭಯ’ದಿಂದ ಕಿಟ್ ವಿತರಣೆ

Update: 2020-04-18 22:15 IST

ಮಂಗಳೂರು, ಎ.18: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ವಿಧಿಸಲಾದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾದ ಅರ್ಹ ಕುಟುಂಬಗಳಿಗೆ ಯುನಿವೆಫ್ ಕರ್ನಾಟಕದ ‘ಅಭಯ’ದಿಂದ ಕಿಟ್ ವಿತರಿಸಲಾಯಿತು.

‘ಅಭಯ’ ತಂಡದ ಸಂಚಾಲಕ ನ್ಯಾಯವಾದಿ ಸಿರಾಜುದ್ದೀನ್‌ರ ನೇತೃತ್ವದಲ್ಲಿ ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶದ ಮಧ್ಯಮ ವರ್ಗದವರನ್ನು ಗುರುತಿಸಿ ಆಹಾರ ಸಾಮಗ್ರಿಗಳನ್ನು ವಿತರಿಸಿದರು. ‘ಅಭಯ’ದ 8 ಶಾಖೆಗಳಲ್ಲದೆ ಜಿಲ್ಲೆಯ 6 ತಾಲೂಕುಗಳ ಹೆಚ್ಚಿನ ಪ್ರದೇಶಗಳಿಗೆ ಇದನ್ನು ತಲುಪಿಸಲಾಯಿತು.

ಈ ಸಂದರ್ಭ ಜಿಲ್ಲಾಧ್ಯಕ್ಷ ನೌಫಲ್ ಹಸನ್, ಉಳ್ಳಾಲ ಶಾಖೆಯ ಅಧ್ಯಕ್ಷ ಸರ್ಫರಾಝ್ ನವಾಝ್, ನಿಮ್ರಾ ಮಸೀದಿ ಅಧ್ಯಕ್ಷ ಬಿ.ಎಂ. ಬದ್ರುದ್ದೀನ್, ಬಂಟ್ವಾಳ ಶಾಖೆಯ ಅಧ್ಯಕ್ಷ ಅಶ್ರಫ್ ಫರಂಗಿಪೇಟೆ, ಮಂಗಳೂರು ಶಾಖೆಯ ಅಧ್ಯಕ್ಷ ಅಬ್ದುಲ್ಲಾ ಪಾರೆ, ಕುದ್ರೋಳಿ ಶಾಖೆಯ ಅಧ್ಯಕ್ಷ ಅರ್ಸಲನ್ ಮತ್ತು ಅಭಯದ ಸದಸ್ಯರಾದ ಅಬ್ದುಸ್ಸಲಾಮ್ ಉಪ್ಪಿನಂಗಡಿ, ಹನೀಫ್ ಕುದ್ರೋಳಿ, ಫಹೀಮುದ್ದೀನ್, ಸಈದ್ ಅಹ್ಮದ್, ತಾಯಿಫ್ ಪಂಪ್‌ವೆಲ್ ಮತ್ತು ತನ್ವೀರ್ ಅಹ್ಮದ್ ಹಾಗೂ ಕಾರ್ಯದರ್ಶಿಗಳಾದ ಖಾಲಿದ್ ಯು.ಕೆ. ಮತ್ತು ಮುಹಮ್ಮದ್ ಸೈಫುದ್ದೀನ್ ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News