×
Ad

ಉಪ್ಪಿನಂಗಡಿ ವ್ಯಕ್ತಿಗೆ ಸೋಂಕು: ಮಾ.20ರ ಬೆಂಗಳೂರು-ಮಂಗಳೂರು ಬಸ್ ಪ್ರಯಾಣಿಕರ ವೈದ್ಯಕೀಯ ತಪಾಸಣೆಗೆ ಸೂಚನೆ

Update: 2020-04-18 22:16 IST

ಮಂಗಳೂರು, ಎ.18: ಕೊರೋನ ಸೋಂಕು ದೃಢಗೊಂಡ ಉಪ್ಪಿನಂಗಡಿ ಮೂಲದ 39ರ ಹರೆಯದ ವ್ಯಕ್ತಿಯು ಮಾ.20ರಂದು ಬೆಂಗಳೂರು-ಮಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್ಸಿನ ಪ್ರಯಾಣಿಕರು ವೈದ್ಯಕೀಯ ತಪಾಸಣೆಗೊಳಗಾಗಲು ದ.ಕ.ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಖಾಸಗಿ ಕೆಲಸ ನಿಮಿತ್ತ ದಿಲ್ಲಿಯಿಂದ ಬೆಂಗಳೂರಿಗೆ ಮಾ.20ರಂದು ಬಂದಿದ್ದ ಉಪ್ಪಿನಂಗಡಿ ಮೂಲದ ಈ ವ್ಯಕ್ತಿಯು ಅಂದು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮಂಗಳೂರಿಗೆ ಭಾರತಿ ಟ್ರಾವೆಲ್ಸ್ (ಕೆ.ಎ.51 ಎಡಿ 5832)ಬಸ್ಸಿನಲ್ಲಿ ಪ್ರಯಾಣಿಸಿದ್ದರು. ಆ ಬಸ್ಸಿನಲ್ಲಿ 32 ಮಂದಿ ಪ್ರಯಾಣಿಕರಿದ್ದು, ಅವರೆಲ್ಲರೂ ಕೂಡ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲೂಕು ಆರೋಗ್ಯ ಕೇಂದ್ರಕ್ಕೆ ತೆರಳಿ ವೈದ್ಯಕೀಯ ತಪಾಸಣೆಗೊಳಗಾಗಬೇಕು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News