ದ.ಕ.ಜಿಲ್ಲೆಯಲ್ಲಿ 6 ಕಂಟೈನ್‌ಮೆಂಟ್ ಝೋನ್
Update: 2020-04-18 22:18 IST
ಮಂಗಳೂರು, ಎ.18: ದ.ಕ.ಜಿಲ್ಲೆಯಲ್ಲಿ ಕೊರೋನ ಸೋಂಕು ದೃಢಗೊಂಡ ಮಂಗಳೂರು, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕಿನ 6 ಪ್ರದೇಶಗಳನ್ನು ‘ಕಂಟೈನ್‌ಮೆಂಟ್ ಝೋನ್’ಗಳಾಗಿ ಗುರುತಿಸಿರುವ ದ.ಕ.ಜಿಲ್ಲಾಡಳಿತ ಈ ಪ್ರದೇಶಗಳಿಗೆ ‘ಇನ್ಸಿಡರ್ ಕಮಾಂಡರ್’ ಗಳನ್ನು ನೇಮಿಸಿದೆ.
ಮಂಗಳೂರು ತಾಲೂಕಿನ ತೊಕ್ಕೊಟ್ಟು ಸ್ಮಾರ್ಟ್ ಪ್ಲಾನೆಟ್, ಬಂಟ್ವಾಳ ತಾಲೂಕಿನ ಸಜಿಪನಡು ಮತ್ತು ತುಂಬೆ ಗ್ರಾಮ, ಪುತ್ತೂರು ತಾಲೂಕಿನ ಸಂಪ್ಯ ಮನೆ, ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಜನತಾ ಕಾಲನಿ, ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮವನ್ನು ಕಂಟೈನ್‌ಮೆಂಟ್ ಝೋನ್ ಎಂದು ಗುರುತಿಸಲಾಗಿದೆ.
ಕೊರೋನ ಸೋಂಕು ಹರಡದಂತೆ ಈ ಪ್ರದೇಶಗಳಲ್ಲಿ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಇಲ್ಲಿನ ಜನರ ಆರೋಗ್ಯ ಮತ್ತು ಜನರಿಗೆ ಇತರ ಸೌಲಭ್ಯ ಒದಗಿಸಲು ಹಾಗೂ ನಿರ್ಬಂಧ ನಿಯಮಗಳನ್ನು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಲು ‘ಇನ್ಸಿಡರ್ ಕಮಾಂಡರ್’ಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.