ಸ್ವಿಝರ್ ಲ್ಯಾಂಡ್ ನ ಪರ್ವತದಲ್ಲಿ ಮಿನುಗಿದ ತ್ರಿವರ್ಣ ಧ್ವಜ

Update: 2020-04-18 17:04 GMT

ಬರ್ನ್ (ಜಿನೀವ), ಎ. 18: ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿರುವ ಮ್ಯಾಟರ್‌ಹಾರ್ನ್ ಪರ್ವತವನ್ನು ಭಾರತೀಯ ತ್ರಿವರ್ಣ ಧ್ವಜದ ಮಾದರಿಯಲ್ಲಿ ಬೆಳಕಿನಿಂದ ಬೆಳಗಿಸುವ ಮೂಲಕ, ಸ್ವಿಝರ್ ಲ್ಯಾಂಡ್ ನೂತನ-ಕೊರೋನವೈರಸ್ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬೆಂಬಲ ನೀಡಿದೆ.

ಸ್ವಿ ಸ್ವಿಝರ್ ಲ್ಯಾಂಡ್ ‌ನ ಅತ್ಯುನ್ನತ ಶಿಖರಗಳಲ್ಲಿ ಒಂದಾಗಿರುವ 14,692 ಅಡಿ ಎತ್ತರದ ಮ್ಯಾಟರ್‌ಹಾರ್ನ್‌ನ್ನು ಶನಿವಾರ ಭಾರತೀಯ ತ್ರಿವರ್ಣ ಧ್ವಜದ ಬಣ್ಣಗಳಿಂದ ಬೆಳಗಿಸಲಾಯಿತು. ಈ ಚಿತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಹಂಚಿಕೊಂಡರು.

‘‘ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸ್ವಿಝರ್ ಲ್ಯಾಂಡ್ ಭಾರತಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದೆ. ಹಿಮಾಲಯದಿಂದ ಆಲ್ಪ್ಸ್‌ವರೆಗೆ ಸ್ನೇಹ ಹಸ್ತ ಚಾಚಿದೆ’’ ಎಂದು ಜಿನೀವದಲ್ಲಿರುವ ಭಾರತೀಯ ವಿದೇಶ ಸೇವೆಯ ಅಧಿಕಾರಿ ಗುರ್ಲೀನ್ ಕೌರ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News