×
Ad

ಮಲೇರಿಯಾ ಔಷಧವನ್ನು ಯುಎಇಗೆ ಕಳುಹಿಸಿಕೊಡಲು ಭಾರತ ಸಮ್ಮತಿ

Update: 2020-04-19 14:42 IST

 ದುಬೈ,ಎ.19: ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಸುವ ಹೈಡ್ರೊಕ್ಸಿಕ್ಲೋರೊಕ್ವಿ ನ್ ಮಾತ್ರೆಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ(ಯುಎಇ)ಕಳುಹಿಸಿಕೊಡಲು ಭಾರತ ನಿರ್ಧರಿಸಿದೆ ಎಂದು ಹೊಸದಿಲ್ಲಿಯಲ್ಲಿರುವ ಗಲ್ಫ್ ಅರಬ್ ರಾಜ್ಯಗಳ ರಾಭಾರಿ ಕಚೇರಿ ತಿಳಿಸಿದೆ.

ಭಾರತವು ಕಳೆದ ತಿಂಗಳು ಮಲೇರಿಯಾ ಔಷಧಗಳ ರಫ್ತಿಗೆ ನಿಷೇಧ ಹೇರಿತ್ತು. ಮಾರಣಾಂತಿಕ ಕೋವಿಡ್-19 ಚಿಕಿತ್ಸೆಗೆ ಮಲೇರಿಯಾ ಮಾತ್ರೆಗಳು ಪರಿಣಾಮಕಾರಿಯಾಗುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಅಮೆರಿಕಕ್ಕೆ ಮಲೇರಿಯಾ ಔಷಧವನ್ನು ತಕ್ಷಣವೇ ಕಳುಹಿಸಿಕೊಡುವಂತೆ ಭಾರತ ಸರಕಾರಕ್ಕೆ ಒತ್ತಡ ಹಾಕಿದ್ದರು. ಭಾರತವು ಅಮೆರಿಕ ಮಾತ್ರವಲ್ಲ ಇತರ ದೇಶಗಳಿಗೂ ಮಲೇರಿಯಾ ಮಾತ್ರೆಗಳನ್ನು ರಫ್ತು ಮಾಡಲು ಮುಂದಾಗಿದೆ.

ಕೋವಿಡ್-19 ರೋಗದ ಚಿಕಿತ್ಸೆಗೆ 5.5 ಮಿಲಿಯನ್ ಮಾತ್ರೆಗಳನ್ನು ಯುಎಇಗೆ ಕಳುಹಿಸಿಕೊಡಲಾಗುತ್ತಿದೆ ಎಂದು ರಾಯಭಾರಿ ಕಚೇರಿ ಶನಿವಾರ ತಿಳಿಸಿದೆ.

ಅಮೆರಿಕ ಹಾಗೂ ಮಾರಿಷಸ್  ದೇಶಗಳು ಈಗಾಗಲೇ ಮಲೇರಿಯಾ ಔಷಧವನ್ನು ಸ್ವೀಕರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News