ಆ್ಯಂಬುಲೆನ್ಸ್ ನಲ್ಲಿ ಗಡಿ ದಾಟಲು ಯತ್ನ : ಪುತ್ತೂರಿನಲ್ಲಿ ಏಳು ಮಂದಿ ವಿರುದ್ಧ ಕೇಸು ದಾಖಲು
Update: 2020-04-19 16:04 IST
ಪುತ್ತೂರು : ಆ್ಯಂಬುಲೆನ್ಸ್ ನಲ್ಲಿ ದ.ಕ. ಜಿಲ್ಲೆಯ ಗಡಿ ದಾಟಲು ಯತ್ನಿಸಿದ ಆರೋಪದಲ್ಲಿ ಏಳು ಮಂದಿಯ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿದ್ದಾರೆ.
ಪುತ್ತೂರಿನ ಮಹಮ್ಮದ್ ಜುನೈದ್, ಮಹಮ್ಮದ್ ಇಲ್ಯಾಸ್, ಸಲೀಮುದ್ದೀನ್ ಯಾನೆ ಪಾಪು, ಅಬ್ದುಲ್ ರಝಾಕ್, ರಶೀದ್, ಸಂಶುದ್ದೀನ್, ಮಹಮ್ಮದ್ ಇರ್ಷಾದ್ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಏಳು ಮಂದಿ ಆ್ಯಂಬುಲೆನ್ಸ್ ನಲ್ಲಿ ರಾತ್ರಿ ಮೈಸೂರು ಕಡೆ ಹೊರಟಿದ್ದು, ಕೊಡಗು ಜಿಲ್ಲೆಯ ಕುಶಾಲನಗರ ಕೊಪ್ಪದಲ್ಲಿ ಇವರನ್ನು ತಡೆದ ಪೊಲೀಸರು ತಪಾಸಣೆ ಮಾಡಿ, ವಾಪಸು ಕಳುಹಿಸಿದ್ದರು. ಅವರು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರವೇಶಿಸುವ ವೇಳೆ ಪುತ್ತೂರು ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿದ್ದಾರೆ.