×
Ad

ಬ್ಯಾರಿ ಸಾಹಿತಿ-ಕಲಾವಿದರ ಮಾಹಿತಿಗೆ ಸೂಚನೆ

Update: 2020-04-19 18:49 IST

ಮಂಗಳೂರು, ಎ.19: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ವಿಧಿಸಲಾದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಬ್ಯಾರಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಗೆ ಕೊಡುಗೆ ನೀಡಿದ ಬ್ಯಾರಿ ಸಾಹಿತಿ-ಕಲಾವಿದರಿಗೆ ನೆರವು ನೀಡಲು ರಾಜ್ಯ ಸರಕಾರ ಮುಂದಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಬ್ಯಾರಿ ಅಕಾಡಮಿಯ ಈ ನಿಟ್ಟಿನಲ್ಲಿ ಬ್ಯಾರಿ ಕಲೆಗಳಾದ ದಫ್, ಬುರ್ದಾ, ಕೋಲ್ಕಳಿ, ಒಪ್ಪಣೆ ಕಲಾವಿದರು, ಬ್ಯಾರಿ ಕವಿ, ಸಾಹಿತಿಗಳು, ನಾಟಕ ಸಿನೆಮಾ, ಸಂಗೀತ ನೃತ್ಯ ಕಲಾವಿದರ ಸಹಿತ ಬ್ಯಾರಿ ಸಾಂಸ್ಕೃತಿಕ ರಂಗದಲ್ಲಿ ದುಡಿದವರ ಹೆಸರು ಮತ್ತು ವಿಳಾಸ ಹಾಗೂ ಆಯಾ ವಿಭಾಗದಲ್ಲಿ ಎಷ್ಟು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೀರಿ, ಜಾತಿ-ವರ್ಗ, ಆಧಾರ್ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್ ಸಹಿತ ಬ್ಯಾಂಕ್ ಅಕೌಂಟ್ ಸಂಖ್ಯೆ, ಮೊಬೈಲ್ ಸಂಖ್ಯೆ ಸಹಿತ ಸಂಪೂರ್ಣ ವಿವರವನ್ನು ಕ್ರೋಢೀಕರಿಸುತ್ತಿದೆ.
ಹಾಗಾಗಿ ಬ್ಯಾರಿ ಸಾಹಿತಿ-ಕಲಾವಿದರು ಬ್ಯಾರಿ ಸಾಹಿತ್ಯ ಅಕಾಡಮಿಯ ವಾಟ್ಸ್‌ಆ್ಯಪ್ ಸಂ: (7483946578)ಗೆ ಎ.21ರ ಸಂಜೆ 5 ಗಂಟೆಯೊಳಗೆ ಸೂಕ್ತ ಮಾಹಿತಿ ನೀಡುವಂತೆ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News