×
Ad

‘ವಾರಿಯರ್ ಆಫ್ ದಿ ಡೇ’ ಆಗಿ ಗೋವಿಂದ ಆಯ್ಕೆ

Update: 2020-04-19 21:19 IST

 ಮಂಗಳೂರು, ಎ.19: ಕೊರೋನ ಹಿನ್ನೆಲೆಯಲ್ಲಿ ನಗರದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವ ಸಂದರ್ಭ ಉತ್ತಮವಾಗಿ ಕಾರ್ಯನಿರ್ವಹಿಸಿದ ಓರ್ವ ಪೊಲೀಸ್ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತರು ದಿನದ ಕೊವಿಡ್ ವಾರಿಯರ್ ಎಂದು ಗೌರವಿಸಲಿದ್ದಾರೆ. ಅದರಂತೆ ರವಿವಾರದ ‘ವಾರಿಯರ್ ಆಫ್ ದಿ ಡೇ’ ಆಗಿ ಉಳ್ಳಾಲ ಠಾಣೆಯ ಪಿಸಿ ಗೋವಿಂದ ಆಯ್ಕೆಯಾಗಿದ್ದಾರೆ.

ಸೀಲ್ಡೌನ್ ಮಾಡಲಾದ ತೊಕ್ಕೊಟ್ಟು ಸ್ಮಾರ್ಸ್ ಸಿಟಿ ಬಳಿ ಹಸಿವಿನಿಂದ ಬಳಲುತ್ತಿದ್ದ ಬೀದಿ ನಾಯಿಗಳಿಗೆ ರವಿವಾರ ಆಹಾರ ನೀಡುವ ಮೂಲಕ ಮಾನವಿಯತೆಯನ್ನು ಮೆರೆದು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News